Mysore
21
mist

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ: ಸಂವಿಧಾನ ರಕ್ಷಣೆ ಅನಿವಾರ್ಯ

ಓದುಗರ ಪತ್ರ

ಭಾರತವನ್ನು ಹಿಂದೂ ರಾಷ್ಟ್ರವಾಗಿ ನಿರ್ಮಾಣ ಮಾಡಿ ಈ ದೇಶಕ್ಕೆ ಹೊಸ ಸಂವಿಧಾನವನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂಬ ಸುದ್ದಿ ಹರಡುತ್ತಿದೆ.

ಸರ್ವಧರ್ಮ ಸಮನ್ವಯತೆ ಹಾಗೂ ವಿವಿಧ ಸಂಸ್ಕೃತಿಗಳನ್ನು ಒಳಗೊಂಡಿರುವ ಭಾರತದಲ್ಲಿ ಒಂದು ಧರ್ಮವನ್ನು ಮಾತ್ರ ಮುನ್ನೆಲೆಗೆ ತಂದು ಈ ದೇಶಕ್ಕೆ ಹೊಸ ಸಂವಿಧಾನ ನೀಡಲು ಖಂಡಿತ ಸಾಧ್ಯವಿಲ್ಲ.

ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದುಕೊಂಡಿರುವ ಮನಸ್ಸುಗಳು ಎಂದಿಗೂ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ವನ್ನು ಒಪ್ಪುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ.

ಭಾರತವನ್ನು ಹಿಂದೂ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕು ಎಂದುಕೊಂಡಿರುವ ಮನುವಾದಿಗಳ ಮನಸ್ಥಿತಿಯನ್ನು ನೋಡಿದರೆ ಅವರು ಭಾರತವನ್ನು ಮತ್ತೇ ಶತಮಾನಗಳಷ್ಟು ಹಿಂದಕ್ಕೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೇನೋ ಅನಿಸುತ್ತದೆ. ಆ ಮೂಲಕ ಮೇಲ್ವರ್ಗ, ಕೆಳವರ್ಗವೆಂಬ ತಾರತಮ್ಯವನ್ನು ಮತ್ತೇ ಸೃಷ್ಟಿಸಿ, ದಲಿತ ಸಮುದಾಯಗಳು ಹಾಗೂ ಮಹಿಳೆಯರ ಮೇಲಿನ ಶೋಷಣೆಗಳು, ಅನಿಷ್ಟ ಪದ್ಧತಿಗಳಾದ ಸತಿ ಸಹಗಮನ ಮತ್ತು ದೇವದಾಸಿ ಪದ್ಧತಿಗಳು ಮರುಜೀವ ಪಡೆಯುವಂತೆ ಮಾಡುವ ಹುನ್ನಾರ ಸೃಷ್ಟಿಸಿದ್ದಾರೆ ಎಂಬ ಆತಂಕ ಶುರುವಾಗಿದೆ. ಮನುವಾದಿಗಳು ಸಂವಿಧಾನದ ಬಗ್ಗೆ ಅಸಮಾಧಾನವನ್ನು ಹೊಂದಿರುವುದು ಮುಂದಿನ ಪೀಳಿಗೆ ಸಮಾನತೆಯ ಸೂರಿನಡಿ ಉಸಿರಾಡುತ್ತದೆ ಎಂಬ ಭಾವನೆ ದೂರಾಗುವಂತೆ ಮಾಡಿದೆ. ಆದ್ದರಿಂದ ಭಾರತೀಯರೆಲ್ಲ ಒಗ್ಗೂಡಿ ಸಂವಿಧಾನದ ರಕ್ಷಣೆಗೆ ಮುಂದಾಗಬೇಕಿದೆ.

-ಪಿ.ರಾಜು ಅಶೋಕಪುರಂ, ಸಂಚಾಲಕರು, ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮೈಸೂರು.

Tags:
error: Content is protected !!