ಇತ್ತೀಚೆಗೆ ಸರ್ಕಾರಿ ಬಸ್‌ಗಳು ಪ್ರಚಾರದ ವೇದಿಕೆಗಳಾಗಿದ್ದು, ವಿವಿಧ ಕಂಪೆನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಬಸ್‌ಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚಾರ ಮಾಡುತ್ತಿವೆ.
ವಿಮಲ್ ಪಾನ್ ಮಸಾಲ, ಆಶೀರ್ವಾದ ಪೈಪ್ಸ್, ವಿವಿಧ ಕಂಪೆನಿಗಳ ವಾಹನಗಳು ಹೀಗೆ ಅನೇಕ ಉತ್ಪನ್ನಗಳ ಜಾಹೀರಾತು, ಸಿನಿಮಾ ಪ್ರಚಾರದ ಪೋಸ್ಟರ್‌ಗಳು ಎಲ್ಲ ಸರ್ಕಾರಿ ಬಸ್‌ಗಳಲ್ಲಿಯೂ ರಾರಾಜಿಸುತ್ತಿವೆ. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ಅಳವಡಿಸುವುದ ಎಷ್ಟರ ಮಟ್ಟಿಗೆ ಸರಿ? ಇತ್ತೀಚೆಗೆ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಬಸ್ ಕಿಟಕಿಯಿಂದ ತಲೆ ಆಚೆ ಹಾಕಿದ ಪರಿಣಾಮ ಎದುರು ಬಂದ ವಾಹನ ಅವರ ತಲೆಗೆ ಡಿಕ್ಕಿ ಹೊಡೆದಿದ್ದು, ಆಕೆ ಸಾವನ್ನಪ್ಪಿದ್ದಾರೆ. ಆದ್ದರಿಂದ ಸರ್ಕಾರಿ ಬಸ್‌ಗಳಲ್ಲಿ ಜಾಹೀರಾತುಗಳ ಬದಲು ಸಾರ್ವಜನಿಕರು ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಹೇಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು, ಸಹಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು ಮುಂತಾದ ಸೂಚನೆಗಳನ್ನು ಅಳವಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸಾರಿಗೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಾಹೀರಾತಿನ ಬದಲು ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಬಗ್ಗೆ ಚಿಂತಿಸಲಿ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.



