Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಪೊಲೀಸ್‌ರ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಜ್ಜು

ನಾಳೆ ಕೊಡಗು ಪೊಲೀಸ್‌ ಸಾಂಸ್ಕೃತಿಕ ವೇದಿಕೆಗೆ ಚಾಲನೆ

ಮಡಿಕೇರಿ: ಅತ್ಯಂತ ಒತ್ತಡದಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗಾಗಿ ಅವರ ಕಲಾವಂತಿಕೆಯ ಅನಾವರಣಕ್ಕಾಗಿ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ಸ್ಥಾಪನೆ ಮಾಡಲಾಗಿದೆ.

ದಿನನಿತ್ಯ ತನಿಖೆ, ಬಂದೋಬಸ್ತ್, ಅಪರಾಧ ಪ್ರಕರಣಗಳ ನೈಜಾಂಶವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಗಾಂಭೀರ್ಯದಿಂದ ಕೆಲಸ ನಿರ್ವಹಿಸುವ ಪೊಲೀಸ್ ಇಲಾಖೆಯಲ್ಲಿ ಹಲವು ಪ್ರತಿಭಾನ್ವಿತರು ಇದ್ದಾರೆ. ಜಿ ಪೊಲೀಸರು ತಮ್ಮ ದಕ್ಷತೆ, ಪ್ರಾಮಾಣಿಕತೆಗೆ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಕಠಿಣ ಅಪರಾಧ ಪ್ರಕರಣಗಳನ್ನೂ ಮಿಂಚಿನ ವೇಗದಲ್ಲಿ ಭೇದಿಸಿ ರಾಜ್ಯಮಟ್ಟದಲ್ಲಿ ಹೆಸರುಗಳಿಸಿzರೆ. ಕ್ರೀಡೆಯಲ್ಲಂತೂ ತಮ್ಮ ಛಾಪುಮೂಡಿಸಿ ಜಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದಿzರೆ. ಇದೇ ರೀತಿ ಲಲಿತ ಕಲೆಗಳಲ್ಲಿಯೂ ಹಲವಷ್ಟು ಪೊಲೀಸರಿಗೆ ವಿಶೇಷ ಅಸಕ್ತಿ ಇರುವುದನ್ನು ಮನಗಂಡು ಸಾಂಸ್ಕೃತಿಕ ವೇದಿಕೆ ರಚಿಸಲಾಗಿದೆ. ಜ. ೨೬ರ ಸಂಜೆ ಅಧಿಕೃತವಾಗಿ ಈ ವೇದಿಕೆ ಉದ್ಘಾಟನೆಗೊಳ್ಳುವುದರೊಂದಿಗೆ ಪೊಲೀಸರ ಕಲಾಪ್ರತಿಭೆಯೂ ಅನಾವರಣಗೊಳ್ಳಲಿದೆ.

ಏನಿದರ ಉದ್ದೇಶ : ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದು, ಒತ್ತಡದ ಕಾರ್ಯನಿರ್ವಹಣೆಯಿಂದ ಪ್ರತಿಭೆಯನ್ನು ಹೊರತರಲು ವೇದಿಕೆ ಹಾಗೂ ಅವಕಾಶಗಳು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಲ್ಯಾಣ ಕಾರ್ಯಕ್ರಮದಡಿ ಒತ್ತಡ ನಿವಾರಿಸುವ ಸಲುವಾಗಿ, ಪೊಲೀಸರು ಕೂಡ ಕಲೆಯಲ್ಲಿ ತೊಡಗಿಸಿಕೊಳ್ಳುವ ಉzಶದಿಂದ ಸಾಂಸ್ಕೃತಿಕ ವೇದಿಕೆಯನ್ನು ಸೃಷ್ಟಿ ಮಾಡಲಾಗಿದೆ. ರಾಜ್ಯದಲ್ಲಿ ಬೆರಳೆಣಿಕೆ ಇಲಾಖೆಗಳಲ್ಲಿ ಈ ರೀತಿ ವೇದಿಕೆಗಳಿದ್ದು, ಇದೀಗ ಕೊಡಗು ಜಿಯಲ್ಲಿಯೂ ವಿನೂತನ ಪ್ರಯತ್ನವನ್ನು ಅನುಷ್ಠಾನ ಮಾಡಲಾಗುತ್ತಿದೆ. ಸಾಂಸ್ಕೃತಿಕ ವೇದಿಕೆಗೆ ಪ್ರತಿಭಾನ್ವಿತರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುತ್ತದೆ. ಕಲಾ ಪೋಷಕರಾಗಿ ಉನ್ನತ ಅಧಿಕಾರಿಗಳು ಇರಲಿದ್ದಾರೆ. ಕಲಾಸಕ್ತರು ಕೂಡ ಸದಸ್ಯರಾಗಿರುತ್ತಾರೆ. ಕೇವಲ ಪೊಲೀಸರು ಮಾತ್ರವಲ್ಲದೆ ಪೊಲೀಸ್ ಕುಟುಂಬದವರಿಗೂ ತಂಡದಲ್ಲಿ ಅವಕಾಶ
ನೀಡಲಾಗುವುದು. ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಧ್ಯೇಯ ಹೊಂದಲಾಗಿದೆ. ಲಲಿತ ಕಲೆಯ ೫ ಪ್ರಕಾರಗಳಾದ ನಟನೆ, ಸಂಗೀತ, ನೃತ್ಯ, ಸಾಹಿತ್ಯ, ಚಿತ್ರಕಲೆಯನ್ನು ಉತ್ತೇಜಿಸುವುದು ವೇದಿಕೆಯ ಮೂಲ ಉzಶವಾಗಿದೆ. ಪರಿಣತರಿಂದ ಪೊಲೀಸ್ ಹಾಗೂ ಅವರ ಕುಟುಂಬದಲ್ಲಿ ಕಲೆಯಲ್ಲಿ ಆಸಕ್ತಿ ಹೊಂದಿದವರಿಗೆ ತರಬೇತಿಯನ್ನು ನೀಡಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಕೆಲಸವೂ ಈ ವೇದಿಕೆ ಮೂಲಕ ನಡೆಯಲಿದೆ.

ಜ. ೨೬ರಂದು ಉದ್ಘಾಟನೆ: ಜ. ೨೬ರಂದು ಸಂಜೆ ೫. ೩೦ಕ್ಕೆ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ಗಾನಸಂಭ್ರಮ ದೊಂದಿಗೆ ವರ್ಣರಂಜಿತವಾಗಿ ಉದ್ಘಾಟನೆಗೊಳ್ಳಲಿದೆ. ಪೊಲೀಸ್ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಸರಿಗಮಪ ರಿಯಾಲಿಟಿ ಶೋ ವಿಜೇತ ಚನ್ನಪ್ಪ ಹುzರ್, ಕೊಡಗಿನವರಾದ ಪ್ರಗತಿ ಬಡಿಗೇರ್, ಸ್ಪಽ ಅನ್ವಿತ್ ಕುಮಾರ್, ಪೊಲೀಸ್ ಇಲಾಖೆ ಸಿಬ್ಬಂದಿ ಸರಿಗಮಪ ಸ್ಪರ್ಧೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಸುಬ್ರಹ್ಮಣ್ಯ, ಮಂಗಳೂರಿನ ಒಟ್ಟು ೨೦ ಗಾಯಕರು, ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ. ಇದರೊಂದಿಗೆ ಪೊಲೀಸರಿಂದ ಸಮೂಹ ಗಾಯನವೂ ಪ್ರಸ್ತುತಗೊಳ್ಳಲಿದೆ. ಕಲೆಯಲ್ಲಿ ಸಾಧನೆ ತೋರಿದ ಕೆಲ ಪೊಲೀಸರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು. ಬಹುಭಾಷಾ ನಟಿ ಉಳ್ಳಿಯಡ ಹರ್ಷಿಕಾ ಪೂಣಚ್ಚ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ನೀಡಲಿದ್ದಾರೆ. ಇವರೊಂದಿಗೆ ಇಲಾ ಖೆಯ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿರುತ್ತದೆ.

ಕೊಡಗಿನ ಪೊಲೀಸರಲ್ಲಿರುವ ಕಲಾ ಪ್ರದರ್ಶನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಈ ವೇದಿಕೆಯನ್ನು ರಚನೆ ಮಾಡಲಾಗಿದೆ. ಒತ್ತಡದಲ್ಲಿರುವ ಪೊಲೀಸರ ಮನೋಸ, ಕ್ರಿಯಾಶೀಲತೆ ಹೆಚ್ಚಾಗಲು ಇದು ಪೂರಕವಾಗುತ್ತದೆ. -ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು

Tags:
error: Content is protected !!