Mysore
21
overcast clouds

Social Media

ಬುಧವಾರ, 15 ಜನವರಿ 2025
Light
Dark

ಸಿಎಂ ಕುರ್ಚಿಗಾಗಿ ಯಾವುದೇ ರೇಸ್‌ ನಡೆಯುತ್ತಿಲ್ಲ, ಸಿದ್ದರಾಮಯ್ಯನವರ ನೇತೃತ್ವದಲ್ಲೇ ಆಡಳಿತ ನಿರ್ವಹಣೆ: ಎಚ್.ಸಿ.ಮಹದೇವಪ್ಪ

ಮೈಸೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಯಾವುದೇ ರೇಸ್‌ ನಡೆಯುತ್ತಿಲ್ಲ. ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರೇ ಕುಳಿತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿಯೇ ಆಡಳಿತ ನಿರ್ವಹಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು(ಜನವರಿ.15) ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಗಟ್ಟಿಯಾಗಿರುತ್ತದೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಅವರೇ ಗಟ್ಟಿಯಾಗಿ ಕುಳಿತಿದ್ದು, ಮುಂದೆಯೂ ಸಿದ್ದರಾಮಯ್ಯನವರೇ ಕುಳಿತಿರುತ್ತಾರೆ. ಅದರಲ್ಲಿ ಸಿಎಂ ಕುರ್ಚಿಯಾಗುತ್ತಿದೆ ಅಥವಾ ಅಲಗಾಡುತ್ತಿದೆ ಎಂಬ ಯಾವ ಚರ್ಚೆಯೂ ಬೇಡ ಎಂದರು.

ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ಯಾವ ರೇಸ್‌ ಕೂಡ ನಡೆಯುತ್ತಿಲ್ಲ. ರೇಸ್‌ ನಡೆಯದ ಮೇಲೆ ಮುಖ್ಯಮಂತ್ರಿ ಕುರ್ಚಿಗಾಗಿ ಆಕಾಂಕ್ಷಿ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಸರ್ಕಾರದಲ್ಲಿ ರೇಸ್‌ ಮುಗಿದಿದೆ, ನಾವು ಗುರಿ ತಲುಪಿದ್ದೇವೆಂಬತೆ ಸರ್ಕಾರವನ್ನು ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಮುಂದಿನ ಚುನಾವಣೆ 2028ಕ್ಕೆ ಬರಲಿದೆ. ಆಗಲೂ ನಮ್ಮ ಸರ್ಕಾರವೇ ಅಧಿಕಾರ ಬರುತ್ತದೆ ಎಂಬ ವಿಶ್ವಾಸವಿದೆ. ಹೀಗಾಗಿ ಸದ್ಯಕ್ಕೆ ಈ ರೀತಿಯ ಯಾವುದೇ ಪ್ರಶ್ನೆಗಳು ಬೇಡ. ಆಗ ಬೇಕಾದರೆ ರೇಸಿನ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

ಇನ್ನೂ ವಿರೋಧ ಪಕ್ಷಗಳಿಗೆ ಸಾಂವಿಧಾನಿಕವಾಗಿ ಕೆಲಸ ಮಾಡಲು ಯಾವ ವಿಚಾರಗಳಿಲ್ಲ. ಆದರೆ
ಕಾರಣವಿಲ್ಲದ ವಿಚಾರವನ್ನು ಇದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ವಿಪಕ್ಷಗಳು ತಮ್ಮ ಹುದ್ದೆ ನಿರ್ವಹಿಸುವಲ್ಲಿ ಸೋತಿವೆ. ಹೀಗಾಗಿ ಅವರಿಗೆ ರಾಜಕೀಯ ಜವಾಬ್ದಾರಿ ಹಾಗೂ ಪ್ರಬುದ್ಧತೆಯಲ್ಲಿ ಸೋತಿವೆ ಎಂದು ವ್ಯಂಗ್ಯವಾಡಿದ್ದಾರೆ.

ಈ ವೇಳೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡಿದ ಅವರು, ಕೆಪಿಸಿಸಿ ಹುದ್ದೆಯಲ್ಲಿ ಅಧ್ಯಕ್ಷರ ಸ್ಥಾನದ ಕುರಿತು ನಮ್ಮ ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಹಾಗಾಗಿ ಈ ವಿಚಾರದಲ್ಲಿ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.

ಹಸುವಿನ ಕೆಚ್ಚಲನ್ನು ಕತ್ತರಿಸುವ ವಿಚಾರ: ಬಿಜೆಪಿಯವರು ರಾಜಕೀಯ ಮಾಡುವುದನ್ನು ನಿಲ್ಲಿಸಲಿ

ಇದೇ ಸಂದರ್ಭದಲ್ಲಿ ಹಸುವಿನ ಕೆಚ್ಚಲನ್ನು ಕತ್ತರಿಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೈತನ ಒಡನಾಡಿಯಾಗಿರುವ ಹಸು, ಕೃಷಿಯ ಆದಿಯಾಗಿ ಹಲವಾರು ಸಂಗತಿಗಳಲ್ಲಿ ಜನೋಪಯೋಗಿ ಆಗಿದೆ ಎಂದರು.

ಸಂಭಾವಿತ ತನಕ್ಕೆ ಉದಾಹರಣೆ ಆಗಿರುವ ಹಸುವಿನ ಗುಣವನ್ನು ” ಹಸುವಿನ ಮನಸ್ಸುಳ್ಳ ವ್ಯಕ್ತಿ” ಎಂಬುದಾಗಿಯೂ ಉದಾಹರಿಸುವುದನ್ನು ನಾವು ಕೇಳಿದ್ದೇವೆ. ಇಂತಹ ಹಸುವಿನ ಕೆಚ್ಚಲನ್ನು ಕತ್ತರಿಸುವ ಹೀನ ಕೆಲಸ ಮಾಡಿರುವ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಜರುಗಿಸಿದ್ದು ಈ ಪೈಶಾಚಿಕ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಇನ್ನು ಹಸುವಿನ ಕೆಚ್ಚಲನ್ನು ಕತ್ತರಿಸುವ ಕೃತ್ಯವನ್ನು ಯಾರೂ ಕೂಡಾ ಸಮರ್ಥನೆ ಮಾಡುವುದಿಲ್ಲ.
ಹೀಗಾಗಿ ಹಸುವಿನ ವಿಷಯದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿರುವ ಬಿಜೆಪಿಗರು ಮೊದಲು ಇಂತಹ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ತಿಳಿಸಿದರು.

Tags: