Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮಂಡ್ಯ| ಬಲಮುರಿಯ ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ. ವಿದ್ಯಾರ್ಥಿ ಸಾವು

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿಯ ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ. ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮೈಸೂರಿನ ನಾಗನಹಳ್ಳಿ ಗ್ರಾಮದ ಎಸ್‌.ಶ್ರೇಯಸ್‌ ಎಂಬುದಾಗಿ ಗುರುತಿಸಲಾಗಿದ್ದು, ಮಂಡ್ಯ ಜಿಲ್ಲೆಯ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ. ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮೃತ ಎಸ್.ಶ್ರೇಯಸ್‌ ಅವರೊಂದಿಗೆ ತೆರಳಿದ್ದ ಸ್ನೇಹಿತರು ಈಜಲು ಬಾರದ ಹಿನ್ನೆಲೆಯಲ್ಲಿ ಕಾವೇರಿ ನದಿ ದಡದಲ್ಲಿಯೇ ಕುಳಿತಿದ್ದರು. ಆದರೆ ಈಜಲು ಬರುತ್ತಿದ್ದ ಕಾರಣ ಮೃತ ಶ್ರೇಯಸ್‌ ಏಕಾಂಗಿಯಾಗಿ ಈಜಲು  ನದಿಗಿಳಿದ್ದರು. ಈ ಸಂದರ್ಭದಲ್ಲಿ ಬಲಮುರಿಯ ಕಾವೇರಿ ನದಿಯಲ್ಲಿರುವ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!