Mysore
17
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಓದುಗರ ಪತ್ರ: ಆಡಳಿತ ವ್ಯವಸ್ಥೆ ಸುಧಾರಣೆಯಾಗಬೇಕಿದೆ

dgp murder case

ವಾರದ 5 ದಿನಗಳಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡಿ ಎಂದು ಇನ್ಫೋಸಿಸ್‌ನ ಎನ್.ಆರ್.ನಾರಾಯಣ ಮೂರ್ತಿಯವರು ಕರೆ ನೀಡಿದ್ದರು. ಈಗ ಎಲ್ ಅಂಡ್ ಟಿ ಕಂಪೆನಿಯ ಮುಖ್ಯಸ್ಥ ಎಸ್‌.ಎನ್‌. ಸುಬ್ರಮಣ್ಯನ್, ವಾರದಲ್ಲಿ 90 ಗಂಟೆಗಳು ಕೆಲಸ ಮಾಡಿ ಎಂದು ಕರೆ ಕೊಟ್ಟಿದ್ದಾರೆ.

ಖಾಸಗಿ ಐಟಿ, ಬಿಟಿ ಕಂಪನಿಗಳಲ್ಲಿ ವಾರದಲ್ಲಿ 40 ಗಂಟೆಗಳು ಕೆಲಸ ಮಾಡಿ ಬಹಳಷ್ಟು ಮಂದಿ ಜೇಬು ತುಂಬಿಸಿಕೊಂಡು ಉಳಿದ ಎರಡು ದಿನಗಳನ್ನು ಮೋಜಿನಲ್ಲಿ ಕಳೆಯುತ್ತಾರೆ. ಇನ್ನೊಂದು ಕಡೆ ಬಹುತೇಕ ಸರ್ಕಾರಿ ಉದ್ಯೋಗಿಗಳು, ಈಗ ಸಾಕಷ್ಟು ತೃಪ್ತಿದಾಯಕ ವೇತನ ಪಡೆದರೂ ವಾರದಲ್ಲಿ 6 ದಿನಗಳು ಕೆಲಸ ಮಾಡಿದರೂ ಲಂಚ ಕೊಡದೆ ಯಾವ ಫೈಲ್ ಕೂಡ ಮುಂದೆ ಹೋಗುವುದಿಲ್ಲ. ಇಂದಿಗೂ ಬಹಳಷ್ಟು ಕಚೇರಿಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ, ಹಾಜರಾತಿ ಹಾಕುವ ವ್ಯವಸ್ಥೆಯೇ ಕಡ್ಡಾಯವಾಗಿಲ್ಲ. ಯಾವ ಕೆಲಸದ ನಿಮಿತ್ತ ಕಚೇರಿಗೆ ಹೋದರೂ ನಾಳೆ ಬಾ ಎನ್ನುವುದು ಅವರ ಸಿದ್ಧ ಉತ್ತರವಾಗಿರುತ್ತದೆ. ಕಚೇರಿ ತೆರೆದಿರುತ್ತದೆ, ಆದರೆ ನೌಕರ ಇರುವುದಿಲ್ಲ. ಹಾಗಾಗಿ ಆಡಳಿತದ ವ್ಯವಸ್ಥೆ ಸುಧಾರಣೆಯಾಗದ ಹೊರತು 100 ಗಂಟೆ ಕೆಲಸ ಮಾಡಿದರೂ ಪ್ರಯೋಜನ ಆಗುವುದಿಲ್ಲ.

-ಮುಳ್ಳೂರು ಪ್ರಕಾಶ್, ಮೈಸೂರು.

 

Tags:
error: Content is protected !!