ದೇಶದ ಬೆನ್ನೆಲುಬು ರೈತ. ಇಡೀ ನಾಡಿಗೆ ಅನ್ನ ಕೊಡುವ ರೈತರ ದಿನಾಚರಣೆಯನ್ನು ಸರ್ಕಾರ ಹೆಸರಿಗಷ್ಟೇ ಆಚರಣೆ ಮಾಡುತ್ತಿದೆಯೇ ವಿನಾ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಚರಣೆ ಮಾಡುತ್ತಿಲ್ಲ ಅನಿಸುತ್ತದೆ. ಪ್ರತಿವರ್ಷ ಸರ್ಕಾರದ ವತಿಯಿಂದ ವಿಶ್ವ ರೈತ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ ಈವರೆಗೂ ಯಾವುದೇ ಸರ್ಕಾರವಾದರೂ ರೈತರ ಸಂಕಷ್ಟವನ್ನು ಪರಿಹರಿಸಲು ಮುಂದಾಗಿಲ್ಲ. ತಮ್ಮದು ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆಯೇ ವಿನಾ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮುಂದಾಗಿಲ್ಲ. ಜತೆಗೆ ಅವರಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರಗಳು, ಬಿತ್ತನೆ ಬೀಜಗಳನ್ನೂ ಪೂರೈಸುವುದಿಲ್ಲ.
ಸರ್ಕಾರ ವಿಶ್ವ ರೈತರ ದಿನಾಚರಣೆಯನ್ನು ‘ರೈತರ ಹಬ್ಬ’ ಎಂದು ಪರಿಗಣಿಸಿ ಎಲ್ಲಾ ತಾಲ್ಲೂಕುಗಳ ಎಲ್ಲ ಕಚೇರಿಗಳಲ್ಲಿಯೂ ಆಚರಣೆ ಮಾಡಬೇಕು. ಆ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು. -ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.





