Mysore
21
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಕೇರಳ | ದೇಗುಲ ಕಾರ್ಯಕ್ರಮ ವೇಳೆ ಆನೆ ದಾಳಿ;17 ಮಂದಿಗೆ ಗಾಯ

ಕೇರಳ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದರ ಧಾರ್ಮಿಕ ಉತ್ಸವದ ವೇಳೆ ಆನೆಯೊಂದು ದಾಳಿ ಮಾಡಿದ ಪರಿಣಾಮ 17ಮಂದಿ ಗಾಯಗೊಂಡಿದ್ದಾರೆ.

ಮಲಪ್ಪುರಂನ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ನಡೆದ, ಪುತಿಯಂಗಡಿ ‘ನೆರ್ಚಾ’ ಎಂಬ ಧಾರ್ಮಿಕ ಕಾರ್ಯಕ್ರಮದ ವೇಳೆ ಆನೆಯೊಂದು ಏಕಾಏಕಿ ದಾಳಿ ಆಕ್ರೋಶಗೊಂಡು ಮುಂದಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಈ ಪೈಕಿ ಪಾಕತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

 

Tags:
error: Content is protected !!