Mysore
28
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಕೆ.ಆರ್‌ ನಗರ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ:; ರಂಗೇರಿದ ಕಣ

ಮತದಾರರ ಮನವೊಲಿಕೆಯಲ್ಲಿ ತೊಡಗಿರುವ ಹುರಿಯಾಳುಗಳು

ಭೇರ್ಯ ಮಹೇಶ್
ಕೆ. ಆರ್. ನಗರ: ಪಟ್ಟಣದ ಪಿಎಲ್‌ಡಿ ಬ್ಯಾಂಕಿನ ಆಡಳಿತ ಮಂಡಳಿಗೆ ಜ.೧೯ರ ಭಾನುವಾರ ಚುನಾವಣೆ ನಡೆಯಲಿದ್ದು, ಕ್ಷೇತ್ರದಲ್ಲಿ ರಾಜಕೀಯ ಕಣ ರಂಗೇರಿದೆ.

ಭಾನುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಸ್ಪರ್ಧಿಸುವ ಹುರಿಯಾಳುಗಳು ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದು ಗೆಲುವಿನ ತಂತ್ರ ಹೆಣೆಯುತ್ತಿದ್ದಾರೆ. ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲವಾ ದರೂ ರಾಜಕೀಯ ಪಕ್ಷಗಳ ಬೆಂಬಲದಿಂದ ಸ್ಪರ್ಧಿಸಿದರೆ ಹೆಚ್ಚು ಮತ ಪಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವ ಅವಕಾಶ ಸಿಗು ವುದರಿಂದ ಪಕ್ಷದ ಹೆಸರಿನಲ್ಲಿ ಉಮೇದುವಾರಿಕೆ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕಾಂಗ್ರೆಸ್ ಮತ್ತು ಜಾ. ದಳ ಮುಖಂಡರು ತಮ್ಮ ಕಡೆಯವರಿಗೆ ಪಕ್ಷದ ಬೆಂಬಲ ನೀಡುವಂತೆ ನಾಯಕರ ಬೆನ್ನು ಬಿದ್ದಿದ್ದು ರಾಜಕೀಯ ಲಾಬಿ ನಡೆಸಿ ಬಲ ಪ್ರದರ್ಶನ ಮಾಡುತ್ತಿದ್ದಾರೆ.

ತಮ್ಮ ಪಕ್ಷಗಳ ಬೆಂಬಲಿಗರನ್ನು ಗೆಲ್ಲಿಸಿ ಕೊಳ್ಳಲು ಎರಡೂ ಪಕ್ಷಗಳ ಮುಖಂಡರು ಕಾರ್ಯನಿರತರಾಗಿದ್ದಾರೆ.

ಪ್ರಸ್ತುತ ಬ್ಯಾಂಕಿನಲ್ಲಿ ಕಾಂಗ್ರೆಸ್ ಬೆಂಬಲಿ ತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮತ್ತೆ ಈ ಚುನಾವಣೆಯಲ್ಲಿಯೂ ಅಽಕಾರ ಕೈವಶ ಮಾಡಿಕೊಳ್ಳಲು ರಾಜ ಕೀಯ ತಂತ್ರಗಾರಿಕೆ ಆರಂಭಿಸಿ ಸೂಕ್ತ ಅಭ್ಯ ರ್ಥಿಗಳನ್ನು ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ. ಜಾ. ದಳ ಪಕ್ಷದವರು ಕೂಡ ಶತಾಯ ಗತಾಯ ಬ್ಯಾಂಕಿನ ಚುಕ್ಕಾಣಿ ಹಿಡಿಯಲು ಪ್ರಯತ್ನ ಪಡುತ್ತಿದ್ದು, ಈ ಸಂಬಂಧ ಈಗಾ ಗಲೇ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿರುವುದರಿಂದ ರಾಜಕೀಯ ಜಿದ್ದಾ ಜಿದ್ದಿನ ಕಣ ರಂಗು ಪಡೆದುಕೊಂಡಿದೆ.

ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ೧೧ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜ. ೧೯ರ ಭಾನುವಾರ ಮತದಾನ ನಡೆದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ಪುರಸಭೆ ಸದಸ್ಯ ಉಮೇಶ್ ಮತ್ತು ಕೆ. ಆರ್. ನಗರ ಸಾಲಗಾರರ ಕ್ಷೇತ್ರದಿಂದ ಎಲ್. ಎಸ್. ಮಹೇಶ್ ಅವರು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಅಽಕಾರದಲ್ಲಿರುವ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಯವರು ರೈತರ ಕೆಲಸ ಸಮರ್ಪಕವಾಗಿ ಮಾಡುತ್ತಿಲ್ಲವೆಂಬ ದೂರುಗಳಿವೆ. ಜತೆಗೆ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡುವಾಗ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತರೇ ಹೇಳುತ್ತಿದ್ದು, ಷೇರುದಾರ ರೈತ ಸದಸ್ಯರು ಎನ್‌ಡಿಎ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಕೋರಿದರು.

ಪುರಸಭೆ ಮಾಜಿ ಅಧ್ಯಕ್ಷ ಡಿ. ಕಾಂತರಾಜು, ಸದಸ್ಯರಾದ ಕೆ. ಪಿ. ಪ್ರಭುಶಂಕರ್, ಸಂತೋಷ್ ಗೌಡ, ಕೆ. ಎಲ್. ಜಗದೀಶ್, ಮಾಜಿ ಸದಸ್ಯ ಉಮಾಶಂಕರ್, ಬಿಜೆಪಿ ಮುಖಂಡ ಹೆಚ್. ವಿ. ಅನಿಲ್, ಹೊಸೂರು ಪಿಎಸಿಸಿ ಅಧ್ಯಕ್ಷ ಕೋಳಿ ಕಿಟ್ಟಿ, ಸಾಲಿಗ್ರಾಮ ಜಾ. ದಳ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಜಾ. ದಳ ವಕ್ತಾರ ಕೆ. ಎಲ್. ರಮೇಶ್, ಜಾ.ದಳ ಮುಖಂಡರಾದ ರುದ್ರೇಶ್(ಅಯ್ಯ), ರಾಮನಾಥ್, ಸುರೇಶ್, ವಿಕಾಶ್, ಬಿ. ರಮೇಶ್, ಸಿ. ಜೆ. ಆನಂದ್, ಹೆಚ್. ಪಿ. ಶಿವಣ್ಣ, ಕೃಷ್ಣಶೆಟ್ಟಿ, ಎಂ. ಕೆ. ಮಹದೇವ್, ಕೆ. ಟಿ. ತ್ಯಾಗ ರಾಜು, ತಂದ್ರೆ ಮಂಜು, ಜೆಲ್ಲಿರಾಜು, ಹೆಚ್. ಕೆ. ಕೀರ್ತಿ, ರಾಧಾಕೃಷ್ಣ ಹಾಜರಿದ್ದರು.

 

Tags:
error: Content is protected !!