Mysore
27
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಬಿಜೆಪಿಗೆ ನೀಲಿ ಶಾಲು ಧರಿಸುವುದು ಈಗ ಹೊಸ ಫ್ಯಾಷನ್‌: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ಬೆಂಗಳೂರು: ಅಮಿತ್‌ ಶಾರವರ ಕರ್ನಾಟಕ ರಾಜ್ಯ ಬಿಜೆಪಿಗೆ ನೀಲಿ ಶಾಲು ಧರಿಸುವುದು ಈಗ ಹೊಸ ಫ್ಯಾಷನ್‌ ಆಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬಿಜೆಪಿಯವರ ಹೆಗಲ ಮೇಲೆ ಕೇಸರಿ ಶಾಲು ಹೋಯ್ತು, ನೀಲಿ ಶಾಲು ಬಂತು. ನನಗೆ ಇದೊಂದು ವಿಶೇಷ ವಿಸ್ಮಯದಂತೆ ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜೈ ಭೀಮ್ ಎನ್ನುವುದು ಫ್ಯಾಷನ್ ಎಂದಿದ್ದ ಅಮಿತ್ ಶಾವರ ಬಿಜೆಪಿಗೆ, ನೀಲಿ ಶಾಲು ಧರಿಸುವುದು ಈಗ ಹೊಸ “ಫ್ಯಾಷನ್“ ಆಗಿದೆಯೇ?, ಕೇಸರಿ ಶಾಲಿನ ಮೇಲೆ ಬಿಜೆಪಿಗರಿಗೆ ಅಸಹನೆ ಉಂಟಾಗಿದೆಯೇ? ಅಥವಾ ಕೇಸರಿ ಶಾಲು ಕಂಡರೆ ನಿರ್ಲಕ್ಷ್ಯವೇ? ಎಂದು ಪ್ರಶ್ನಿಸಿದ್ದಾರೆ.

ಕೇಸರಿ ಶಾಲಿನಿಂದ ಸಂವಿಧಾನದ ಅನುಯಾಯಿಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವುದು ಕರ್ನಾಟಕ ರಾಜ್ಯ ಬಿಜೆಪಿಗೆ ಅರ್ಥವಾದಂತಿದೆ ಎಂದು ಹೇಳಿದ್ದಾರೆ.

 

Tags:
error: Content is protected !!