Mysore
27
haze

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ: ಅಸ್ಸಾದಿಯವರ ಸಾವು ದೇಶಕ್ಕೆ ತುಂಬಲಾರದ ನಷ್ಟ

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಚಾರಿಕ ಚಿಂತನೆಯ ಉಪನ್ಯಾಸವನ್ನು ನೀಡುವುದರ ಮೂಲಕ ಪ್ರಖ್ಯಾತಿ ಪಡೆದಿದ್ದ ಚಿಂತಕ ಪ್ರೊ. ಮುಜಾಪರ್ ಅಸ್ಸಾದಿಯ ವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ.

ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಕುರಿತು ವಿಶೇಷ ಅಧ್ಯಯನ ನಡೆಸಿ ಅವರ ಸಂಕಷ್ಟದ ಜೀವನವನ್ನು ಸಮಾಜದ ಮುಂದೆ ತೆರೆದಿಟ್ಟ ಅಸ್ಸಾದಿಯವರು ಆದಿವಾಸಿಗಳ ಜೀವನಮಟ್ಟ ಸುಸ್ಥಿರವಾಗಿ ಬೆಳವಣಿಗೆಯಾ ಪ್ರಮುಖ ಪಾತ್ರವಹಿಸಿದರು. ಅನೇಕ ಸಂಶೋಧನಾ ವರದಿಗಳನ್ನು, ಪುಸ್ತಕಗಳನ್ನು ಬರೆದಿರುವ ಮುಜಾಪರ್ ಅಸ್ಸಾದಿಯವರ ಅನೇಕ ಬರಹಗಳು ಆಡಳಿತ ವಲಯಕ್ಕೆ ಮಾರ್ಗದರ್ಶನವನ್ನು ನೀಡುತ್ತಿವೆ. ಇವರಿಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ. ಅಸ್ಸಾದಿಯವರು ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು. ಅಲ್ಲದೆ ಅನೇಕ ಸಂಶೋಧನಾ ವಿದ್ಯಾರ್ಥಿಗಳೂ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಇಂತಹ ಚಿಂತಕರನ್ನು ಅಗಲಿಕೆಯಿಂದ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.

-ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗg

 

Tags:
error: Content is protected !!