Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮೈಸೂರಲ್ಲೊಂದು ಅಮಾನವೀಯ ಘಟನೆ: ಆಗ ತಾನೇ ಜನಿಸಿದ ಮಗುವನ್ನು ಚರಂಡಿಗೆ ಎಸೆದ ತಾಯಿ

ಮೈಸೂರು: ಆಗ ತಾನೇ ಜನಿಸಿದ ನವಜಾತ ಗಂಡು ಮಗುವನ್ನು ಚರಂಡಿಗೆ ಎಸೆದಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ಹೆಚ್‌.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.

ಮಗು ಚರಂಡಿಯಲ್ಲಿ ಪತ್ತೆಯಾಗಿದ್ದು, ಕೊರೆಯ ಚಳಿಯಲ್ಲಿ ಚರಂಡಿ ನೀರಿನಲ್ಲಿ ರಾತ್ರಿಯೆಲ್ಲಾ ಕಳೆದಿದೆ. ಮುಂಜಾನೆ ಮಗು ಅಳುವನ್ನು ಗಮನಿಸಿದ ಆಶಾ ಕಾರ್ತಕರ್ತೆಯರು ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಶಾ ಕಾರ್ಯಕರ್ತೆ ಸರೋಜಮ್ಮ ಹಾಗೂ ಚಂದ್ರಮ್ಮ ಈ ಮಗುವಿಗೆ ಚಿಕಿತ್ಸೆ ದಾಖಲಿಸಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅಕ್ರಮ ಸಂಬಂಧದಿಂದ ಜನಿಸಿದ ಕಾರಣ ಮರ್ಯಾದೆಗೆ ಅಂಜಿ ಮಗುವನ್ನು ಚರಂಡಿಗೆ ಎಸೆಯಾಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

Tags:
error: Content is protected !!