Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮಂಡ್ಯದಲ್ಲಿಯೂ ಐಶ್ವರ್ಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲು

ಮಂಡ್ಯ: ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ಹೇಳಿಕೊಂಡು ಬೆಂಗಳೂರಿನ ಚಿನ್ನದಂಗಡಿ ಮಾಲಕಿಗೆ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಈಗ ಐಶ್ವರ್ಯಾ ಗೌಡ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನ ಬಳಿಕ ಈಗ ಮಂಡ್ಯದಲ್ಲಿಯೂ ಐಶ್ವರ್ಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ರವಿಕುಮಾರ್‌ ಹಾಗೂ ಪೂರ್ಣಿಮಾ ಎಂಬುವವರು ಐಶ್ವರ್ಯ ಗೌಡ ವಿರುದ್ಧ ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿ ಐಶ್ವರ್ಯ ಗೌಡಗೆ ಪೊಲೀಸರು ನೋಟಿಸ್‌ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಶ್ವರ್ಯ ಗೌಡ ಹಣ ಡಬಲ್‌ ಮಾಡಿಕೊಡುವ ಆಸೆ ತೋರಿಸಿ 55 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆ ಎಂದು ರವಿಕುಮಾರ್‌ ಹಾಗೂ ಪೂರ್ಣಿಮಾ ದೂರು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಸಾಕ್ಷಿ ಕಲೆ ಹಾಕುತ್ತಿದ್ದು, ಐಶ್ವರ್ಯ ಗೌಡಗೆ ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುವ ಸಾಧ್ಯತೆಯಿದೆ.

 

Tags:
error: Content is protected !!