Mysore
22
broken clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಪಿನಾಕಪಾಣಿಯಾಗಲಿರುವ ಗಣೇಶ

ಶಿವ ಪಿನಾಕವನ್ನು ಹಿಡಿದಿರುವುದರಿಂದ ಅವನಿಗೆ ಪಿನಾಕಪಾಣಿ ಎಂದು ಹೆಸರಾಯಿತು. ಶಿವನ ಕೈಲಿರುವ ಈ ಆಯುಧ ತ್ರಿಶೂಲ ಎಂದೂ ಹೇಳಲಾಗುತ್ತಿದೆ. ಬಿಲ್ಲು ಎಂದೂ ಇದೆ. ಮಯಾಸುರನ ತ್ರಿಪುರಗಳನ್ನು ನಾಶ ಮಾಡಲು ಶಿವ ಬಳಸಿದ ಆಯುಧ ಇದು ಎನ್ನುವುದಾಗಿ ಹೇಳಲಾಗುತ್ತದೆ. ಇಲ್ಲಿ ‘ಪಿನಾಕ’ದ ಪ್ರಸ್ತಾಪಕ್ಕೆ ಕಾರಣ ಆ ಹೆಸರಿನ ಚಿತ್ರ. ಗಣೇಶ್ ಅಭಿನಯದ ಹೊಸ ಚಿತ್ರದ ಹೆಸರಿದು. ಕ್ಷುದ್ರ ಶಕ್ತಿಗಳ ವಿರುದ್ಧದ ರುದ್ರ ನರ್ತನದ ಮೂಲ ಕಥಾವಸ್ತುವುಳ್ಳ ಚಿತ್ರದ ಹೆಸರಿನ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಗಣೇಶ್ ಮುಖ್ಯಭೂಮಿಕೆಯ ಈ ಚಿತ್ರ ಮುಂದಿನ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿದೆ.

ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿ ನಾಲ್ಕು ಕೇಂದ್ರಗಳಲ್ಲಿ ೧೦೦ ದಿನಗಳನ್ನು ಪೂರೈಸಿದೆ. ಅಷ್ಟೇ ಅಲ್ಲ, ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು ೧೦೦ ದಿನ ಪೂರೈಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಣೇಶ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಕನ್ನಡದಲ್ಲಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರದಲ್ಲಿ ಗಣೇಶ್ ಕೇಂದ್ರ ಪಾತ್ರಧಾರಿ. ಚಿತ್ರದ ಶೀರ್ಷಿಕೆಯ ಟೀಸರ್ ಇದು ಗಣೇಶ್ ಅಭಿನಯದ ವಿಭಿನ್ನ ಚಿತ್ರವಾಗಲಿದೆ ಎನ್ನುವುದನ್ನು ಹೇಳಿತ್ತು. ಸಂಸ್ಥೆ ನಿರ್ಮಿಸುತ್ತಿರುವ ೪೯ನೇ ಚಿತ್ರವಿದು.

ಕೆಲವು ದಿನಗಳ ಹಿಂದೆ ಶ್ರೀಮುರಳಿ ಅಭಿನಯದಲ್ಲಿ  ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಹೊಸ ಚಿತ್ರವೊಂದರ ಘೋಷಣೆಯಾಗಿತ್ತು. ಅಧ್ಯಕ್ಷ ಇನ್ ಅಮೆರಿಕ ಈ ಸಂಸ್ಥೆಯದು.

ಶಿವರಾಜ್‌ಕುಮಾರ್ ಅಭಿನಯದ ಚಿತ್ರವೊಂದು ಈ ವರ್ಷದಲ್ಲೇ ಆರಂಭವಾಗಲಿದೆ. ಕನ್ನಡದ ಎಲ್ಲ ಜನಪ್ರಿಯ ನಟರ ಜೊತೆ ಚಿತ್ರ ನಿರ್ಮಿಸಲಿರುವ ಈ ಸಂಸ್ಥೆ ತೆಲುಗಿನಲ್ಲಿ ‘ಕಾರ್ತಿಕೇಯ ೨’, ‘ವೆಂಕಿ ಮಾಮಾ’, ಓ ಬೇಬಿ’, ‘ಧಮಾಕಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ‘ಪಿನಾಕ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸಂಸ್ಥೆಯ ಐವತ್ತನೇ ಚಿತ್ರ ಪ್ಯಾನ್ ಗ್ಲೋಬಲ್ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಟಿ.ಜಿ.ವಿಶ್ವಪ್ರಸಾದ್. ‘ಪಿನಾಕ’ ಚಿತ್ರದ ಮೂಲಕ ನೃತ್ಯ ಸಂಯೋಜಕ ಧನಂಜಯ್ ಅಲಿಯಾಸ್ ಧನು ಮಾಸ್ಟರ್ ನಿರ್ದೇಶಕರಾಗುತ್ತಿದ್ದಾರೆ.

Tags:
error: Content is protected !!