Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಓದುಗರ ಪತ್ರ: ಭಾರತ ಎಚ್ಚರಿಕೆಯಿಂದ ಆಟವಾಡಲಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸೀರಿಸ್‌ನಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರಿದಿದ್ದು, ನಾಲ್ಕನೆಯ ಟೆಸ್ಟ್‌ನಲ್ಲಿಯೂ ಹೀನಾಯ ಸೋಲು ಅನುಭವಿಸಿದೆ.

ಇದು ಒಪ್ಪುವಂತಹ ಸೋಲಲ್ಲ. ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತರೆ ಅದೇನು ವಿಶೇಷ ಅನಿಸುವುದಿಲ್ಲ. ಆದರೆ ಈ ರೀತಿಯ ಕಳಪೆ ಪ್ರದರ್ಶನದಿಂದ ಸೋತರೆ ಆ ಸೋಲನ್ನು ಸೋಲು ಅನ್ನುವುದಕ್ಕಿಂತ ಶರಣಾಗತಿ ಎನ್ನಲೇಬೇಕು. ಮೊದಲ ಇನ್ನಿಂಗ್ಸ್‌ನಲ್ಲಿ ಎರಡೂ ತಂಡಗಳು ಉತ್ತಮ ಪ್ರರ್ದಶನ ನೀಡಿದ್ದವು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ೩೩೩ ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಸುಲಭವಾಗಿ ಗೆಲ್ಲಲಿದೆ ಎಂಬ ವಿಶ್ವಾಸ ಎಲ್ಲರಲ್ಲಿಯೂ ಇತ್ತು. ಆದರೆ ಅನುಭವಿ ಆಟಗಾರರ ಕಳಪೆ ಪ್ರದರ್ಶನ ಭಾರತ ತಂಡದ ಹೀನಾಯ ಸೋಲಿಗೆ ಕಾರಣವಾಯಿತು. ಭಾರತೀಯ ಕ್ರಿಕೆಟ್ ಮಂಡಳಿ ಹಾಗೂ ಆಯ್ಕೆ ಸಮಿತಿಯವರು ಇಂತಹ ಪ್ರತಿಷ್ಠಿತ ಪಂದ್ಯಾವಳಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ಅನುಭವಸ್ಥ ಮತ್ತು ಹಿರಿಯ ಆಟಗಾರರು ಎಂದು ಪರಿಗಣಿಸದೆ ಉತ್ತಮ ಲಯದಲ್ಲಿರುವ ಆಟಗಾರರನ್ನು ಆಯ್ಕೆ ಮಾಡಿ ಕಳುಹಿಸಬೇಕು ಹಾಗೂ ಆಟಗಾರರಿಗೆ ಗರಿಷ್ಟ ವಯೋಮಿತಿ ನಿಗದಿ ಮಾಡಬೇಕು. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಎಚ್ಚರಿಕೆಯಿಂದ ಆಟವಾಡಲಿ.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು

Tags:
error: Content is protected !!