Mysore
22
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ದುಬಾರಿಯಾದ ಸಾರಿಗೆ ಪ್ರಯಾಣ; ಟಿಕೆಟ್‌ ದರ ಶೇ.15 ಏರಿಕೆಗೆ ಸಂಪುಟ ಸಮ್ಮತಿ

ಬೆಂಗಳೂರು: ಕರ್ನಾಟಕ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ಟಿಕೆಟ್‌ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸ ವರ್ಷದ ಸಂಭ್ರಮದಲ್ಲಿದ್ದ ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.

ರಾಜ್ಯದ ನಾಲ್ಕು ನಿಗಮಗಳಿಂದ ಬಸ್‌ ಪ್ರಯಾಣ ದರ ಏರಿಕೆಯ ಕುರಿತು ಪ್ರಸ್ತಾವನೆಗಳು ಬಂದಿದ್ದವು. ಪರಿಷ್ಕೃತ ದರವು ಜನವರಿ 5 ರಿಂದಲೇ ಅನ್ವಯವಾಗಲಿದ್ದು,ಕೆ ಎಸ್ ಆರ್ ಟಿಸಿ, ಬಿಎಂಟಿಸಿ,ವಾಯುವ್ಯ ಹಾಗೂ ಕೆಡಬ್ಲೂ ಆರ್ ಟಿಸಿ ದರ ಪರಿಷ್ಕರಣೆ ಅಗಲಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸ್ ದರ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಆಡಳಿತ್ಮಾಕ ಅನುಮೋದನೆ ನೀಡಲಾಗಿದೆ.

Tags:
error: Content is protected !!