Mysore
35
few clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ನಟ ಅಲ್ಲು ಅರ್ಜುನ್‌ ಜಾಮೀನು ಅರ್ಜಿ ವಿಚಾರಣೆ ಜನವರಿ.3ಕ್ಕೆ ಮುಂದೂಡಿಕೆ

ಹೈದರಾಬಾದ್:‌ ಪುಷ್ಪ-2 ಪ್ರೀಮಿಯರ್‌ ವೇಳೆ ಕಾಲ್ತುಳಿತ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಹೈದರಾಬಾದ್‌ ನಾಂಪಲ್ಲಿ ಹೈಕೋರ್ಟ್‌ ಜನವರಿ.3ಕ್ಕೆ ಮುಂದೂಡಿಕೆ ಮಾಡಿದೆ.

ಮಧ್ಯಂತರ ಬೇಲ್‌ನಲ್ಲಿದ್ದ ನಟ ಅಲ್ಲು ಅರ್ಜುನ್‌ ಅವರು ರೆಗ್ಯುಲರ್ ಜಾಮೀನು ನೀಡುವುದಾಗಿ ಹೈದರಾಬಾದ್‌ ನಾಂಪಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಅಲ್ಲು ಅರ್ಜುನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಜನವರಿ.3ಕ್ಕೆ ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ಡಿಸೆಂಬರ್.‌4ರಂದು ಪುಷ್ಪ-2 ಪ್ರೀಮಿಯರ್‌ ವೇಳೆ ಥಿಯೇಟರ್‌ನಲ್ಲಿ ಮಹಿಳೆ ರೇವತಿ ಎಂಬುವವರು ಕಾಲ್ತುಳಿತದಿಂದ ಸಾವನ್ನಪ್ಪಿದ್ದರು.

ಘಟನೆ ನಡೆದ ಬಳಿಕ ನಟ ಅಲ್ಲು ಅರ್ಜುನ್‌ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಸೆಂಬರ್.‌13ರಂದು ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್‌ರನ್ನು ಬಂಧಿಸಿದ್ದರು. ಬಳಿಕ ಅಲ್ಲು ಅರ್ಜುನ್‌ಗೆ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

 

 

Tags:
error: Content is protected !!