Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ.

ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ ವರ್ಷ 2025ನ್ನು ಸ್ವಾಗತ ಮಾಡೋಣ ಎಂದು ಕನಸು ಕಂಡಿದ್ದ ಪ್ರವಾಸಿಗರಿಗೆ ಈಗ ತೀವ್ರ ಬೇಸರ ವಾಗಿದೆ.

ನಂದಿಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶವಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸಮುದ್ರಮಟ್ಟಕ್ಕಿಂತ 1478 ಮೀಟರ್‌ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತ ವಿಹಂಗಮ ನೋಟ ನೋಡುವುದಕ್ಕೆ ನಂದಿಬೆಟ್ಟ ತುಂಬಾ ಫೇಮಸ್ ಆಗಿದೆ.

ಆದರೆ ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ತೀವ್ರ ಬೇಸರ ಹೊರಹಾಕಿದ್ದು, ಮತ್ತೊಂದು ಸ್ಥಳದಲ್ಲಿ ನ್ಯೂ ಇಯರ್‌ ಸಂಭ್ರಮಕ್ಕೆ ಪ್ಲಾನ್‌ ಮಾಡುತ್ತಿದ್ದಾರೆ.

ಡಿಸೆಂಬರ್.‌31ರ ಸಂಜೆ 6 ಗಂಟೆಯಿಂದ 2025ರ ಜನವರಿ 1ರಂದು ಬೆಳಿಗ್ಗೆ 6 ಗಂಟೆವರೆಗೂ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಇದರ ಜೊತೆಗೆ ಅತಿಥಿ ಗೃಹಗಳಿಗೂ ಕೂಡ ಪ್ರವೇಶವನ್ನು ಬಂದ್‌ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ ಎನ್ನಲಾಗುತ್ತಿದೆ.

ಈ ಮೂಲಕ ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯಕ್ಕೆ ಈ ಬಾರಿ ಭಾರೀ ನಿರಾಸೆಯಾಗಿದೆ.

Tags: