Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಸಾಹಿತ್ಯ ರಾಜಕಾರಣಿಗಳ ಎಚ್ಚರಿಸಬೇಕು’

ಮಂಡ್ಯ: ರಾಜಕಾರಣಿಗಳನ್ನು ಹೆದರಿಸ ಬಲ್ಲಂತಹ ಶಕ್ತಿ ಸಾಹಿತ್ಯಕ್ಕಿದೆ. ಹಾಗಾಗಿ ರಾಜ ಕಾರಣಿಗಳು ಹಾದಿ ತಪ್ಪದಂತೆ ಸಾಹಿತಿಗಳು ಎಚ್ಚರಿಸಬೇಕು ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ್ ಅಭಿಪ್ರಾಯಪಟ್ಟರು. ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ’ ವಿಷಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ತಪ್ಪು ಮಾಡಿದಾಗ ಬರಹದ ಮೂಲಕ ಪ್ರಹಾರ ನಡೆಸಿ ಎಚ್ಚರಿಸುವ ಕೆಲಸವನ್ನು ಸಾಹಿತಿಗಳು ಮಾಡಬೇಕು. ಆ ಕೆಲಸ ವನ್ನು ಲಂಕೇಶ್ ಮಾಡಿದ್ದರು. ಸಾಹಿತಿಗಳು ರಾಜಕೀಯ ಮಾಡಬಾರದು. ಆದರೆ, ಈಗ ಅವರು ರಾಜಕಾರಣ ಮಾಡದೆ, ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಲೇಖಕರು ಜನರ ಬದುಕನ್ನು ನೋಡಿ ಬರೆಯಬೇಕು. ಗಾಂಧೀಜಿ ಅವರು ಸಾಹಿತ್ಯದ ಬಗ್ಗೆ ಆಡಿರುವ ಮಾತುಗಳನ್ನು ಕುರಿತ ಪ್ರಜ್ಞೆ ಅವರಿಗಿರಬೇಕು. ಪ್ರತಿಯೊಬ್ಬ ಸಾಹಿತಿಯೂ ಜನಪ್ರತಿನಿಽಗಳ ಬಗ್ಗೆ ರಚನಾತ್ಮಕ ಟೀಕೆ, ವಿಮರ್ಶೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ರಾಜಕೀಯದಿಂದ ಯಾರನ್ನೂ ಪ್ರತ್ಯೇಕಿಸುವ ಆವಶ್ಯಕತೆ ಇಲ್ಲ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ಘನ ಸಾಹಿತಿಯಾಗಿ ದ್ದರು. ಅವರಿಗಿಂತ ಚೆನ್ನಾಗಿ ಬರೆಯಲು ಸಾಧ್ಯವೇ? ಎಂದು ಪಾಟೀಲ್ ಪ್ರಶ್ನಿಸಿದರು.

ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ವಿಷಯ ಮಂಡಿಸಿದ ಮಾಜಿ ಶಾಸಕ ಕೆ. ಅನ್ನದಾನಿ, ೧೦ನೇ ಶತಮಾನದ ಪಂಪನಿಂದ ಹೊಸ ಕನ್ನಡದವರೆಗೂ ಸಾಹಿತ್ಯ ಮತ್ತು ರಾಜಕಾರಣ ಬೆಸೆದುಕೊಂಡಿದೆ. ೧೨ನೇ ಶತಮಾನದ ವಚನಕಾರರು, ೧೫ನೇ ಶತಮಾನ ದಲ್ಲಿ ಕುಮಾರವ್ಯಾಸ, ೧೨ನೇ ಶತಮಾನದಲ್ಲಿ ಬಸವಣ್ಣ ರಾಜಾಶ್ರಯದಲ್ಲಿದ್ದುಕೊಂಡೇ ಸಾಹಿತ್ಯ ಕೃಷಿ ಮಾಡಿದರು ಎಂದು ಸ್ಮರಿಸಿದರು. ಸಾಹಿತ್ಯ ಸಮ್ಮೇಳನ ಆಯೋಜಿಸಲು ಮತ್ತು ಪ್ರಶಸ್ತಿ ಪುರಸ್ಕಾರಗಳನ್ನು ನೀಡಲು ರಾಜಕಾರಣಿ ಗಳು ಇರಲೇಬೇಕು. ಸಾಹಿತಿಯಾಗಿ ನಿರ್ಭಿಡೆ ಯಾಗಿ ಹೇಳುವುದನ್ನು ರಾಜಕಾರಣಿ ಹೇಳಲು ಸಾಧ್ಯವಿಲ್ಲ.

ಮತದ ಮುಲಾಜಿಗೆ ಒಳಗಾಗಿ ಮೌನವಹಿಸಬೇಕಾಗುತ್ತದೆ ಎಂದರು. ರಾಜಕೀಯ ಚಿಂತಕ ಡಾ. ಬಿ. ಎಲ್. ಶಂಕರ್ ಆಶಯ ನುಡಿಗಳನ್ನಾಡಿದರು. ಸಾಹಿತ್ಯ ಕೃತಿಗ ಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ವಿಷಯವನ್ನು ಪತ್ರಕರ್ತ ರವೀಂದ್ರ ರೇಷ್ಮೆ ಮಂಡಿಸಿದರು. ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ ರಾಜಕೀಯ ನಿಲುವುಗಳು ವಿಷಯ ಮಂಡಿಸಬೇಕಾದ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಗೈರಾಗಿದ್ದರು. ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಗಿದ್ದಾಗಲೇ ನಿಧನರಾದ ರವಿಕುಮಾರ್ ಚಾಮ ಲಾಪುರ ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಬೆಳಗಾವಿ ಅಧಿವೇಶನದ ನಿಮಿತ್ತ ಕಾನೂನು ಸಚಿವ ಎಚ್. ಕೆ. ಪಾಟೀಲ್ ಬರೆದಿರುವ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ನಾಡೋಜ ಗೊ. ರು. ಚನ್ನಬಸಪ್ಪ ಬಿಡುಗಡೆ ಮಾಡಿದರು

 

Tags: