Mysore
29
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಓದುಗರ ಪತ್ರ: ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ.ಕೃಷ್ಣ ರಾಜಕಾರಣಿಗಳಿಗೆ ಮಾದರಿ

dgp murder case

ಮಾಧ್ಯಮವೊಂದರ ವರದಿ ಪ್ರಕಾರ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ತಮ್ಮ ವೈದ್ಯಕೀಯ ಆರೈಕೆಗಾಗಿ ೪೦ ಲಕ್ಷ ರೂ.ಗಳನ್ನು ಹೊಂದಿಸಲಾಗದೆ ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ತೋಟವನ್ನು ಮಾರಲು ಸಿದ್ಧರಾಗಿದ್ದರಂತೆ. ಇದನ್ನು ತಿಳಿದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ರಾಮಕೃಷ್ಣ ಹೆಗಡೆಯವರ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿ ಲಂಡನ್‌ನಲ್ಲಿ ಚಿಕಿತ್ಸೆ ಕೊಡಿಸಿದರಂತೆ. ಇದರಲ್ಲಿ ಎಸ್.ಎಂ.ಕೃಷ್ಣರವರ ಹೃದಯವಂತಿಕೆಯ ಜತೆಗೆ ಐದು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿದ್ದು, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಹೆಣಗಾಡಬೇಕಾಗಿ ಬಂದಿದ್ದು, ಅವರಲ್ಲಿನ ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ. ಅಂದಿನ ರಾಜಕಾರಣಿಗಳ ಮೌಲ್ಯಯುತ ಬದುಕು ಇಂದಿನ ರಾಜಕಾರಣಿಗಳ ಕಣ್ಣು ತೆರೆಸಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಜನಪ್ರತಿನಿಧಿಯಾದವರೆಲ್ಲರೂ ಐಶಾರಾಮಿ ಜೀವನ ಮಾಡುತ್ತಿರುವಾಗ ರಾಜಕಾರಣಿಯಾದವರ ಬದುಕು ಹೇಗೆ ಮಾದರಿಯಾಗಿರಬೇಕು ಎಂದು ತೋರಿಸಿದವರು ಹೆಗಡೆಯವರು. ಇಂತಹ ಅಪರೂಪದ ರಾಜಕಾರಣಿಯ ವಿರುದ್ಧ ಕೇಳಿಬಂದ ದೂರವಾಣಿ ಕದ್ದಾಲಿಕೆ ಆರೋಪವನ್ನೇ ಮುಂದಿಟ್ಟುಕೊಂಡು ಅದನ್ನೇ ಮಹಾಪರಾಧವೆಂದು ಬಿಂಬಿಸಿ ರಾಜಕೀಯದಿಂದ ಅವರನ್ನು ಬದಿಗೆ ಸರಿಸಲು ಪ್ರಯತ್ನಿಸಿದವರು, ಅವರ ಪ್ರಾಮಾಣಿಕ ಬದುಕನ್ನು ನೋಡದಿದ್ದದ್ದು ಬೇಸರದ ಸಂಗತಿ. ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಗುಲ್ಜಾರಿಲಾಲ್ ನಂದಾ ಅವರೂ ಕೂಡ ಇದೇ ಪರಿಸ್ಥಿತಿ ಅನುಭವಿಸಿದ್ದರು.

ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು

Tags:
error: Content is protected !!