Mysore
21
broken clouds

Social Media

ಶುಕ್ರವಾರ, 02 ಜನವರಿ 2026
Light
Dark

ಸೇವಂತಿಗೆ: ವಾರದ ಹಿಂದೆ ೬೦, ಈಗ ೩೦ ರೂ.

ದಿಢೀರ್ ಕುಸಿತ ಕಂಡ ಸೇವಂತಿಗೆ; ಹಾಕಿದ ಖರ್ಚು ಕೈ ಸೇರದೆ ರೈತರು ಕಂಗಾಲು

ಎಚ್.ಎಸ್.ದಿನೇಶ್ ಕುಮಾರ್

ಮೈಸೂರು: ಹಬ್ಬ ಹರಿದಿನಗಳು ಹಾಗೂ ವಿಶೇಷ ದಿನಗಳಂದು ಮಾರಿಗೆ ೨೦೦ ರೂ.ಗಳಿಗೆ ಮಾರಾಟವಾಗುವ ಮೂಲಕ ದಾಖಲೆಯನ್ನು ಹುಟ್ಟು ಹಾಕುತ್ತಿದ್ದ ಸೇವಂತಿಗೆ ಹೂವಿನ ಧಾರಣೆ ದಿಢೀರ್ ಕುಸಿತ ಕಂಡಿದ್ದು, ರಸ್ತೆ ಬದಿಯಲ್ಲಿ ಮಾರು ಸೇವಂತಿಗೆ ಹೂವು ೧೦ ರೂ.ನಿಂದ ೩೦ ರೂ. ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಹೂವನ್ನು ಬೆಳೆದ ರೈತ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಸೇವಂತಿಗೆ ಹೂವು ಇಲ್ಲವೆಂದರೆ ಯಾವುದೇ ಹಬ್ಬ, ಹರಿದಿನಗಳು, ಕಾರ್ಯ ಕ್ರಮಗಳು ಕಳೆಗಟ್ಟುವುದೇ ಇಲ್ಲ ಎಂಬ ಸ್ಥಿತಿ ಇದೆ. ತನ್ನ ಹಳದಿ ಬಣ್ಣದಿಂದಲೇ ಎಲ್ಲರನ್ನೂ ಸೆಳೆಯುವ ಸೇವಂತಿಗೆ ಹೂವು ಇಂದು ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ವಿಶೇಷ ದಿನಗಳಲ್ಲಿ ೨೦೦ ರೂ. ವರೆಗೂ ಮಾರಾಟವಾಗುವ ಮೂಲಕ ಗ್ರಾಹಕರ ಕೈ ಸುಡುವಂತೆ ಮಾಡುತ್ತಿದ್ದ ಸೇವಂತಿಗೆ ಹೂವನ್ನು ಕೊಳ್ಳುವ ಗ್ರಾಹಕರು ಇಂದು ರೈತರ ಸ್ಥಿತಿಯನ್ನು ನೆನೆದು ಅಯ್ಯೋ ಪಾಪ ಎಂದು ಹೇಳಿಕೊಂಡೇ ಖರೀದಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ, ಕೆ.ಆರ್.ಪೇಟೆ, ಮೈಸೂರು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ರೈತರು ಸೇವಂತಿಗೆ ಹೂವನ್ನು ಬೆಳೆಯುತ್ತಾರೆ. ಡಿಸೆಂಬರ್ ಹಾಗೂ ಜನವರಿ ೧೪ರ ವರೆಗೆ ಯಾವುದೇ ಹಬ್ಬಗಳು ಅಥವಾ ವಿಶೇಷ ದಿನಗಳು ಇಲ್ಲದ ಕಾರಣ ಬೇಡಿಕೆಯೂ ಕಡಿಮೆಯಾಗಿ ಹೂವಿನ ಧಾರಣೆ ಕುಸಿತ ಕಂಡಿದೆ. ಸಂಕ್ರಾಂತಿ ವೇಳೆಗೆ ಹೂವಿನ ಬೆಲೆ ಮತ್ತೆ ಹೆಚ್ಚಳವಾಗಲಿದೆ ಎನ್ನುತ್ತಾರೆ ರೈತರು.

ಡಿಸೆಂಬರ್ ತಿಂಗಳಿನಲ್ಲಿ ಹಿಮಸುರಿಯುವುದರಿಂದ ಹೂವಿನ ಇಳುವರಿಯೂ ಹೆಚ್ಚಾಗುತ್ತದೆ. ಇದೀಗ ಬೆಲೆ ಕುಸಿತ ಕಂಡಿರುವು ದರಿಂದ ರೈತರು ಜಮೀನಿನಲ್ಲಿ ಹೂವು ಕೀಳುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಇ ದರಿಂದ ರೈತರು ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಬೆಳೆಗಾರರು ಹೇಳುತ್ತಾರೆ.

ಬೆಲೆ ಹೆಚ್ಚಿಸಿಕೊಂಡ ಮಲ್ಲಿಗೆ: ಇದೇ ವೇಳೆ ಮಲ್ಲಿಗೆ ಹೂವು ಕೆಜಿ ಗೆ ೧,೨೦೦ ರೂ. ಗಳಿಗೆ ಮಾರಾಟವಾದ ರೆ, ಮರ್ಲೆ ಹೂವು ಕೆಜಿಗೆ ೬೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ಒಂದು ಕೆಜಿಗೆ ಸಾವಿರ ರೂ.ಗೆ ಮಾರಾಟ ವಾಗುತ್ತಿದ್ದ ಕನಕಾಂಬರ ಹೂವಿನ ದರ   ಹ     ಇಂದು ೪೦೦ ರೂ.ಗೆ ಇಳಿಕೆ ಕಂಡಿದೆ. ಉಳಿದಂತೆ ಸುಗಂಧರಾಜ ೫೦ ರೂ.ನಂತೆ ಮಾರಾಟವಾಗುತ್ತಿದ್ದರೆ, ಗುಲಾಬಿ ಹೂವು ೧೬೦ ರಿಂದ ೧೮೦ ರೂ. ವರೆಗೆ ಮಾರಾಟ ವಾಗುತ್ತಿದೆ. ಸೇವಂತಿಗೆ ಬಿಡಿಯಾಗಿ ೫೦ ರೂ.ಗೆ ಮಾರಾಟ ವಾಗುತ್ತಿದೆ. ಊಟಿ ಮಲ್ಲಿಗೆ ಮಾತ್ರ ೧೦೦ ರೂ.ಗಳಿಗೆ ಬಿಕರಿಯಾಗುತ್ತಿದೆ.

” ದರ ಹೆಚ್ಚು ಇರುವಾಗ ಜನರು ಹೂವು ಖರೀದಿಗೆ ಮುಗಿಬೀಳುತ್ತಾರೆ. ಇದೀಗ ಒಂದು ಮಾರು ೨೦ ರೂ.ಗೆ ಕೊಟ್ಟರೂ ಖರೀದಿಗೆ ಮುಂದಾಗುತ್ತಿಲ್ಲ. ಹೂವು ಬೆಳೆದವರಿಗೆ ಹೂ ಕಿತ್ತು ಮಾರುಕಟ್ಟುವ ಕೂಲಿಯೂ ಸಿಗುತ್ತಿಲ್ಲ.”

-ಲೋಕೇಶ್, ನಂಜನಗೂಡು.

” ಮೂರು ದಿನಗಳ ಹಿಂದೆ ಒಂದು ಮಾರು ಸೇವಂತಿಗೆ ಹೂವಿಗೆ ೬೦ ರೂ.ನಿಂದ ೭೦ ರೂ. ಇತ್ತು. ಆದರೆ, ಭಾನುವಾರ ಹೂವಿನ ಬೆಲೆಯಲ್ಲಿ ಕುಸಿತ ಕಂಡಿದೆ. ಅತ್ಯುತ್ತಮ ಗುಣಮಟ್ಟದ ಹೂವು ಮಾರಿಗೆ ೩೦ ರೂ.ಗೆ ಮಾರಾಟವಾಗುತ್ತಿದೆ.”

-ಸಂತೋಷ್, ಹೂವಿನ ವ್ಯಾಪಾರಿ, ಸಾಲುಂಡಿ.

Tags:
error: Content is protected !!