Mysore
25
light rain

Social Media

ಬುಧವಾರ, 09 ಸೆಪ್ಟೆಂಬರ್ 2026
Light
Dark

ಶಬರಿಮಲೆ | 29ದಿನದಲ್ಲಿ ರೂ.163ಕೋಟಿ ಆದಾಯ

ತಿರುವನಂತಪುರ: ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆಗೆ ಡಿಸೆಂಬರ್‌ 14ರವರೆಗೆ ಕಳೆದ 29ದಿನಗಳಲ್ಲಿ ಒಟ್ಟು 22 ಲಕ್ಷ ಅಯ್ಯಪ್ಪ ಸ್ವಾಮಿ ಭಕ್ತರು ಭೇಟಿ ನೀಡಿದ್ದಾರೆ. ಅಲ್ಲದೇ, ಒಟ್ಟು ರೂ.163.89ಕೋಟಿ ಆದಾಯ ಸಂಗ್ರಹವಾಗಿದೆ.

ಈ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ತಿರುವಾಂಕೂರು ದೇವಸ್ಥಾನ ಮಂಡಳಿಯ ಅಧ್ಯಕ್ಷ ಪಿ.ಎಸ್‌ ಪ್ರಶಾಂತ್‌, ಕಳೆದ ವರ್ಷಕ್ಕೆ ಹೋಲಿಸಿದರೆ 4.51ಲಕ್ಷ ಅಧಿಕ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದರು.

ದೇವಸ್ಥಾನದ ಆದಾಯ ಕಳೆದ ವರ್ಷಕ್ಕಿಂತ 22.76ಕೋಟಿ ಹೆಚ್ಚಾಗಿದೆ. ಕಳೆದ 29ದಿನಗಳಲ್ಲಿ 22,67,956ಲಕ್ಷ ಭಕ್ತರು ಭೇಟಿ ನೀಡಿದ್ದು, ಒಟ್ಟು163.89ಕೋಟಿ ಆದಾಯ ಬಂದಿದೆ. ಈ ಪೈಕಿ ಪ್ರಸಾದ ಮಾರಾಟದಿಂದಲೇ ರೂ.82.67ಕೋಟಿ ಆದಾಯ ಬಂದಿದೆ ಎಂದು  ತಿಳಿಸಿದರು.

Tags:
error: Content is protected !!