Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಓದುಗರ ಪತ್ರ: ಶುದ್ಧ ನೀರಿನ ಘಟಕದ ಬಳಿ ನೈರ್ಮಲ್ಯ ಕಾಪಾಡಿ

ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಮೈಸೂರು ನಗರಪಾಲಿಕೆಯಿಂದ ಸ್ಥಾಪಿಸಿರುವ ಶುದ್ಧ ನೀರಿನ ಘಟಕ ಅನೈರ್ಮಲ್ಯದ ತಾಣವಾಗಿದೆ. ಐದು ರೂ. ನಾಣ್ಯ ಹಾಕಿ ನೀರು ಪಡೆಯಲಾಗುತ್ತಿದೆ. ಸಾರ್ವಜನಿಕರು ನೀರು ತೆಗೆದುಕೊಳ್ಳುವಾಗ ಸುರಿಯುವ ನೀರು ರಸ್ತೆಯ ಬದಿಯಲ್ಲಿ ನಿಂತು ಸೊಳ್ಳೆ, ನೊಣಗಳ ಆವಾಸ ಸ್ಥಾನವಾಗಿದೆ. ಇದರಿಂದಾಗಿ ಡೆಂಗ್ಯು, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯುಂಟಾಗಿದೆ. ಸಂಬಂಽಸಿದ ಅಧಿಕಾರಿಗಳು ನೀರಿನ ಘಟಕದ ಬಳಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಾಗಿದೆ.

-ಎಸ್. ಶ್ರೀದೇವಿ, ಮೈಸೂರು.

 

Tags:
error: Content is protected !!