Mysore
18
few clouds

Social Media

ಮಂಗಳವಾರ, 13 ಜನವರಿ 2026
Light
Dark

ಸಾಹಿತ್ಯ ಸಮ್ಮೇಳನ | ‘ಆಹಾರ ಕ್ರಾಂತಿಗೆʼ ಆಹ್ವಾನ ನೀಡಿದ ಮಂಡ್ಯ ಜನತೆ

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ೮೭ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರಥಮ ಬಾರಿಗೆ ಆಹಾರ ಸಂಸ್ಕೃತಿಯ ಚರ್ಚೆಯ ಅಂಗಳವಾಗಿದೆ. ಶತಮಾನಗಳ ರೀತಿ ರಿವಾಜುಗಳಿಗೆ ಮಂಡ್ಯ ಸಾಹಿತ್ಯ ಸಮ್ಮೇಳನ ಹೊಸ ಆಯಾಮವನ್ನೇ ನೀಡಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಅಘೋಷಿತ ಮಾಂಸಾಹಾರ ನಿಷೇಧದ ವಿರುದ್ಧ ಮಂಡ್ಯ ಜಿಲ್ಲೆಯ ಪ್ರಬುದ್ಧ ಜನತೆ `ಆಹಾರ ಕ್ರಾಂತಿಗೆ ಆಹ್ವಾನʼ ನೀಡಿದ್ದಾರೆ. ಅಂದು ‘ವಿಚಾರ ಕ್ರಾಂತಿಗೆ ಆಹ್ವಾನʼ ವಿತ್ತ ಕುವೆಂಪು ಮೂಢನಂಬಿಕೆ, ಮಡಿವಂತಿಕೆ ಹಾಗೂ ಪ್ರಶ್ನಿಸದೆ ಒಪ್ಪಿನಡೆಯುವುರದ ವಿರುದ್ಧ ಖಂಡಿಸಿದ್ದರು. ಇಂದು ಸಾಹಿತ್ಯ ಸಮ್ಮೇಳನದಲ್ಲಿ ಅಘೋಷಿತ ಮಾಂಸಹಾರ ನಿಷೇಧದ ವಿರುದ್ಧ ಜಿಲ್ಲೆಯ ಜನ ಆಹಾರ ವೈವಿಧ್ಯಮಯ ಸಾಂಸ್ಕೃತಿಕತೆ ʻಆಹಾರ ಕ್ರಾಂತಿʼಗೆ ಆಹ್ವಾನ ನೀಡಿದ್ದಾರೆ.

ʻಆಹಾರ ಕ್ರಾಂತಿʼಗೆ ಆಹ್ವಾನ ಎಂಬ ಪೊಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ನಾಡಿನ ಪ್ರಜ್ಞಾವಂತರು, ಬುದ್ದಿಜೀವಿಗಳು ಮತ್ತು ಸಾಹಿತಿಗಳು ಬೆಂಬಲ ಸೂಚಿಸುತ್ತಿದ್ದಾರೆ.

ಬಾಡೂಟ ಬಳಗವು ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವೂ ಇರಬೇಕೆಂದು ಸಿಎಂ ಸಿದ್ದರಾಮಯ್ಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರನ್ನು ಒತ್ತಾಯಿಸಿದೆ.

ಸಮ್ಮೇಳನ ಹತ್ತಿರವಾಗುತ್ತಿದ್ದಂತೆ ಈ ಅಭಿಯಾನವು ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಸ್ಯಾಹಾರದ ಜೊತೆಗೆ ಮಾಂಸಾಹಾರವೂ ಇರಲಿ ಎಂಬ ಸ್ಲೋಗನ್‌ಗಳು ಸಾಮಾಜಿಕ ಜಾಲತಾಣಗಳನ್ನು ವ್ಯಾಪಿಸಿವೆ.

Tags:
error: Content is protected !!