ಹೊಸದಿಲ್ಲಿ: ದೇಶವು ಸಂವಿಧಾನ ಅಳವಡಿಸಿಕೊಂಡು 75 ವರ್ಷ ಸಂದಿರುವ ಹಿನ್ನೆಲೆ ಸಂಸತ್‌ನಲ್ಲಿ ಇಂದು (ಡಿ.13) ಮತ್ತು ನಾಳೆ(ಡಿ.14) ಸಂವಿಧಾನ ಕುರಿತ ಚರ್ಚೆ ನಡೆಯಲಿದೆ.
ಲೋಕಸಭೆಯಲ್ಲಿ ಇಂದು ಮಧ್ಯಾಹ್ನ 12ಗಂಟೆಗೆ ಚರ್ಚೆ ಆರಂಭವಾಗಲಿದೆ. ರಕ್ಷಣ ಸಚಿವ ರಾಜನಾಥ ಸಿಂಗ್ ಮೊದಲಿಗೆ ಚರ್ಚೆ ಪ್ರಾರಂಭಿಸಲಿದ್ದಾರೆ. ಸಂವಿಧಾನ ಕುರಿತಾದ ಚರ್ಚೆಗೆ 12 ಗಂಟೆಗಳನ್ನು ಮೀಸಲಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ನೀಡಲಿದ್ದಾರೆ. ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿ ಅವರು ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ.