Mysore
21
mist

Social Media

ಭಾನುವಾರ, 11 ಜನವರಿ 2026
Light
Dark

ವೀರಸೇನಾನಿಗಳಿಗೆ ಅಪಮಾನ: ಕೊಡಗು ಅರ್ಧದಿನ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಮಡಿಕೇರಿ: ಕೊಡಗು ಮೂಲದ ವೀರ ಸೇನಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡಿರುವುದನ್ನು ಖಂಡಿಸಿ ಸರ್ವ ಜನಾಂಗಗಳ ಒಕ್ಕೂಟದಿಂದ ಇಂದು(ಡಿ.12) ಕರೆ ನೀಡಿರುವ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಥಮ ಮಹಾ ದಂಡನಾಯಕ, ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರನ್ನು ಅಪಮಾನಿಸಿ ಪೋಸ್ಟ್‌ ಮಾಡಿದ್ದ ಲಾಯರ್‌ಗೆ ಆರು ತಿಂಗಲ ಕಾಲ ಬಾರ್‌ ಕೌನ್ಸಿಲ್‌ನಿಂದ ಹೊರಗಿಡಲಾಗಿದೆ. ಆದರೆ ಆ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲವಾದರೂ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಸರ್ವಜನಾಂಗದ ಒಕ್ಕೂಟ ಬಂದ್‌ಗೆ ಕರೆ ನೀಡಿದೆ.

ಜಿಲ್ಲೆಯ ಅನುದಾನಿತ ಶಾಲಾ, ಕಾಲೇಜಿಗೆ ರಜೆ ಘೋಷಿಸಿದ್ದರು, ಬಹುತೇಕ ಖಾಸಗಿ ಶಾಲೆಗಳು ಎಂದಿನಂತೆ ತೆರೆದಿವೆ. ವಿವಿಧ ಸಂಘ ಸಂಸ್ಥಗಳು ಬಂದ್‌ಗೆ ಬೆಂಬಲ ನೀಡಿವೆ. ಇಂದು ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್‌ ಮಾಡಲಾಗಿತ್ತು.

ಕುಶಾಲನಗರ, ವಿರಾಜಪೇಟೆಯಲ್ಲಿ ಬಂದ್‌ಗೆ ಉತ್ತಮ ಸ್ಪಂದನೆ ದೊರಕಿದೆ. ನಾಪೋಕ್ಲು ಪಟ್ಟಣ ಸಂಪೂರ್ಣ ಬಂದ್‌ ಆಗಿದೆ. ಸೋಮವಾರ ಪೇಟೆ, ಕೊಡ್ಲಿಪೇಟೆಯಲ್ಲಿ ಎಂದಿನಂತೆ ಅಂಗಡಿ ಮುಗ್ಗಟ್ಟು ತೆರಿದಿದ್ದು, ಬಸ್‌ ಸಂಚಾರ ಬೆರಳೆಣಿಕೆಯಲ್ಲಿವೆ. ಮಡಿಕೇರಿಯ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಮುಚ್ಚಿದ್ದು, ಮಾರ್ಕೆಟ್ ಒಳಭಾಗದಲ್ಲಿ ಮಾಂಸದ ಅಂಗಡಿಗಳು ಹಾಗು ಕೆಲವೊಂದು ರೆಸ್ಟೋರೆಂಟ್ ಗಳು ತೆರೆದಿದೆ. ಇನ್ನು ಬೆರಳೆಣಿಕೆಯ ಆಟೋ ರಿಕ್ಷಾ ಸಂಚಾರ ಎಂದಿನಂತಿದೆ.

Tags:
error: Content is protected !!