ಮಡಿಕೇರಿ: ಕಾಫಿ ತೋಟದಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆಯೊಂದು ಎರಗಿ ಗಂಭೀರವಾಗಿ ಘಾಸಿಗೋಳಿಸಿರುವ ಘಟನೆ ಇಂದು ಬೆಳಿಗ್ಗೆ 8.30ರ ಸಮಯದಲ್ಲಿ ಪಾಲಿಬೆಟ್ಟ ಮೂಕ ಟಾಟಾ ಕಾಫಿ ತೋಟದಲ್ಲಿ ನಡೆದಿದೆ.
ಕಾರ್ಮಿಕ ಮಂಜು (37) ಎಂಬುವವರು ಇತರ ಕಾರ್ಮಿಕರೊಂದಿಗೆ ಹೋಗುತ್ತಿದ್ದಾಗ ಹಿಂದಿನಿಂದ ಧಾವಿಸಿ ಬಂದ ಕಾಡಾನೆ ದಾಳಿ ಮಾಡಿ ದಂತದಿಂದ ತಿವಿದಿದೆ. ಬಳಿಕ ಗಾಯಾಳು ಮಂಜು ಅವರನ್ನು ಪಾಲಿಬೆಟ್ಟ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರು ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ