Mysore
22
mist

Social Media

ಗುರುವಾರ, 15 ಜನವರಿ 2026
Light
Dark

ಓದುಗರ ಪತ್ರ: ವಿದ್ಯುತ್‌ ದರ ಏರಿಕೆ ಅನಗತ್ಯ

ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪರಿಷ್ಕರಿಸಲು ಎಲ್ಲ ಎಸ್ಕಾಂಗಳು ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುವ ಬದಲು ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ಕಂಪೆನಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ಮೊತ್ತವನ್ನು ವಸೂಲಾತಿ ಮಾಡಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬಹುದಲ್ಲವೇ? ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಂಡಿದೆ.

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಬೆಲೆ ಏರಿಕೆ ನೀತಿಯನ್ನು ಅನುಸರಿಸುತ್ತಿರುವುದು ಅದಕ್ಕೆ ಜನವಿರೋಧಿ ಸರ್ಕಾರ ಎಂಬ ಪಟ್ಟ ಬರುವಂತೆ ಮಾಡಿದೆ. ಬಡಕುಟುಂಬಗಳ ಅನುಕೂಲಕ್ಕಾಗಿ ಪ್ರತಿ ಮನೆಯ ಯಜಮಾನಿಗೆ ಮಾಸಿಕ ೨,೦೦೦ ರೂ. ನೀಡುತ್ತಿದೆ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಅದೇ ಹಣವನ್ನು ವಸೂಲಿ ಮಾಡುತ್ತಿದೆಯೇನೋ ಅನಿಸುತ್ತದೆ.

ಇನ್ನು ಸಾಕಷ್ಟು ಕಡೆ ವಿದ್ಯುತ್ ಕಳ್ಳತನವಾಗುತ್ತಿದೆ. ಅನೇಕ ಕಡೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಇಲಾಖೆ ಇಂತಹವುಗಳಿಗೆ ಮೊದಲು ಕಡಿವಾಣ ಹಾಕಬೇಕು. ಅಲ್ಲದೆ ಕೆಲ ರಾಜಕಾರಣಿಗಳು, ಅಽಕಾರಿಗಳು, ಸರ್ಕಾರಿ ಕಚೇರಿಗಳಲ್ಲಿ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಮೊದಲು ಆ ಬಾಕಿ ಇರುವ ಹಣವನ್ನು ವಸೂಲಿ ಮಾಡಲಿ ನಂತರ ದರ ಏರಿಕೆಯ ಬಗ್ಗೆ ಚಿಂತಿಸಲಿ.

-ಎ. ಎಸ್. ಗೋಪಾಲಕೃಷ್ಣ, ರಾಮಕೃಷ್ಣ ನಗರ, ಮೈಸೂರು

 

Tags:
error: Content is protected !!