Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕನ್ನಡ ಸಾಹಿತ್ಯ ಸಮ್ಮೇಳನ: ನೋಂದಣಿ ಅವಧಿ ವಿಸ್ತರಣೆ

ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21,22 ರಂದು ನಡೆಯಲಿದೆ.  ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳು https://kannadasahithyaparishattu.in/sammelana2024/ ವೆಬ್ಸೈಟ್ ಮೂಲಕ ಪ್ರತಿನಿಧಿಗಳ ಸಂಖ್ಯೆ, ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೂ 4,077 ಜನರು ಆನ್‌ಲೈನ್ ಮೂಲಕ ನೋಂದಣಿಯಾಗಿದ್ದು, ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 05 ರಂದು ಕೊನೆಯ ದಿನಾಂಕವಾಗಿದ್ದು, ಈ ದಿನಾಂಕವನ್ನು 07 ವರೆಗೆ ವಿಸ್ತರಿಸಲಾಗಿದೆ.

ಒಟ್ಟು 6000 ಜನರಿಗೆ ಅವಕಾಶ ಕಲ್ಪಿಸಿದ್ದು, ಮೊದಲು ನೋಂದಣಿಯಾದವರಿಗೆ ಅಧ್ಯತೆ ಕಲ್ಪಿಸಲಾಗುತ್ತದೆ. ನೋಂದಾಯಿತ ಪ್ರತಿನಿಧಿಗಳಿಗೆ ಬ್ಯಾಗ್, ನೋಟ್ ಪ್ಯಾಡ್, ಪೆನ್, ಅಧ್ಯಕ್ಷರ ಭಾಷಣ, ಆಹ್ವಾನ ಪ್ರತಿಕೆ, ಅರ್ಧ ಕೆ.ಜಿ. ಸಕ್ಕರೆ, ಅರ್ಧ ಕೆ.ಜಿ. ಬೆಲ್ಲ ಹಾಗೂ ಐ.ಡಿ. ಕಾರ್ಡ್ಗಳನ್ನು ನೀಡಲಾಗುವುದು ಹಾಗೂ ನೊಂದಾಯಿತ ಪ್ರತಿನಿಧಿಗಳಿಗೆ ಆನ್ಲೈನ್ ನಲ್ಲಿ ಓ.ಓ.ಡಿ ಪ್ರಮಾಣ ಪತ್ರವನ್ನುಸಹ ನೀಡಲಾಗುವುದು.

ಆನ್‌ಲೈನ್ ಮೂಲಕ ನೋಂದಾಣಿಯಾದ ಪ್ರತಿನಿಧಿಗಳಿಗೆ, ಸಮುದಾಯ ಭವನ, ಖಾಸಗಿ ವಸತಿ ಶಾಲೆ, ಹಾಸ್ಟೆಲ್, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ವಸತಿ ಕಿಟ್ ನಲ್ಲಿ ಹಾಸುವ ಮ್ಯಾಟ್, ಹೊದಿಕೆ, ಏರ್ ಪಿಲ್ಲೋ, ಟೂತ್ ಪೆಸ್ಟ್, ಬ್ರಷ್, ಸೋಪ್ ಹಾಗೂ ಬಾಚಣಿಗೆಯನ್ನು ನೀಡಲಾಗುವುದು. ಆನ್‌ಲೈನ್ ಮೂಲಕ ನೋಂದಣಿಯಾದ ಪ್ರತಿನಿಧಿಗಳು ವಸತಿ ಸ್ಥಳಗಳ ವಿವರವನ್ನು ಆನ್ಲೈನ್ ಮೂಲಕ ಮಾಹಿತಿ ನೀಡಲಾಗುತ್ತದೆ. ಸಮ್ಮೇಳನಕ್ಕೆ ಹಾಜರಾಗುವವರಿಗೆ ಮಾರ್ಗದರ್ಶನ ನೀಡಲು ಸೇವಾ ಕೇಂದ್ರ ತೆರೆಯಲಾಗಿರುತ್ತದೆ ಎಂದು ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: