ನವದೆಹಲಿ: ಲೋಕಸಭೆ ಸದನ ಕಲಾಪ ವೇಳೆ ಉದ್ಯಮಿ ಗೌತಮ ಅದಾನಿ ಲಂಚ ಪ್ರಕರಣವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ಉಭಯ ಸದನಗಳ ಕಲಾಪವನ್ನು ನಾಳೆಗೆ(ಡಿ.3) ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಇಂದು(ಡಿ.2) ಸದನ ಕಲಾಪ ನಡೆಯುತ್ತಿರುವ ವೇಳೆ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಗೌತಮ್ ಅದಾನಿ ಅವರ ಲಂಚ ಪ್ರಕರಣವನ್ನು ಚರ್ಚೆ ಮಾಡುವಂತೆ ಆಗ್ರಹಿಸಿದ್ದರು. ಹೀಗಾಗಿ ಉಭಯ ಸದನಗಳ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಲೋಕಸಭೆಯಲ್ಲಿ ಚಳಿಗಾಲದ ಅಧೀವೇಶ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷ
ಸಂಸದರ ನಡುವೆ ಗಲಾಟೆ ಗದ್ದಲಗಳು ನಡೆಯುತ್ತಿದ್ದವು. ಈ ಕಾರಣ ದಿನದಿಂದ ದಿನಕ್ಕೆ ಲೋಕಸಭೆ ಅಧಿವೇಶನವನ್ನು ಮುಂದೂಡಲಾಗುತ್ತಿತ್ತು. ಅಂತೆಯೇ ಇಂದು ಸಹ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದ ಕಾರಣ ನಾಳೆ(ಡಿ.2) ಬೆಳಿಗ್ಗೆ 11 ಗಂಟೆಯವರೆಗೂ ಸದನ ಕಲಾಪವನ್ನು ಮುಂದೂಡಲಾಗಿದೆ.