Columbus
-10
few clouds

Social Media

ಗುರುವಾರ, 01 ಜನವರಿ 2026
Light
Dark

ಸಿಎಂ, ಡಿಸಿಎಂ ಸತ್ಯವಾಗಿ ಕಾನೂನು ಪಾಲಿಸಿದರೆ ಸಾಷ್ಟಾಂಗ ನಮಸ್ಕಾರಿಸುತ್ತೇನೆ: ಅಶ್ವಥ್‌ ನಾರಾಯಣ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸತ್ಯವಾಗಿಯೂ ಕಾನೂನನ್ನು ಪಾಲಿಸಿದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಸಿ.ಎನ್‌.ಅಶ್ವಥ್‌ ನಾರಾಯಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಡಿ.2) ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದ ಸಿಎಂ ಮತ್ತು ಡಿಸಿಎಂ ಅವರಿಗೆ ಕಾನೂನು ಯಾವುದೋ ವೇಳೆ ನೆನಪಾಗುತ್ತದೆ. ಹೀಗಾಗಿ ಮನಸ್ಸಿಗೆ ಇಷ್ಟ ಬಂದಂತೆ ಹೇಳಿಕೆಗಳನ್ನು ನೀಡುತ್ತಾರೆ. ಅವರೇ ಹೀಗೆ ಮಾಡಿದರೆ ಇನ್ನು ಪಕ್ಷದ ಪದಾಧಿಕಾರಿಗಳು ಹೇಗೆ ಹೇಳಿಕೆಗಳನ್ನು ನೀಡುತ್ತಾರೋ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಂದ್ರಶೇಖರನಾಥ ಸ್ವಾಮೀಜಿ ಅವರು ವಕ್ಫ್‌ ಮಂಡಳಿ ಪ್ರತಿಭಟನೆಯಲ್ಲಿ ಇಡೀ ಸಮುದಾಯಕ್ಕೆ ಆಗಿರುವ ಅನ್ಯಾಯ ಕುರಿತು ಹಾಗೂ ನಿಮ್ಮ ಓಲೈಕೆ ರಾಜಕಾರಣ ಕಂಡು ಹೇಳಿಕೆ ನೀಡಿದ್ದರು. ಮಾರನೇ ದಿನ ಸ್ವಾಮೀಜಿ ಅವರು ಅದಕ್ಕೆ ಕ್ಷಮೆಯನ್ನೂ ಕೋರಿದ್ದರು. ಹೀಗಿದ್ದರೂ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಆದರೆ ಸ್ವಾಮೀಜಿ ಅವರು ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಪೊಲೀಸರೇ ಸ್ವತಃ ಮಠಕ್ಕೆ ಭೇಟಿ ನೀಡಿ ಹೇಳಿಕೆಗಳನ್ನು ಪಡೆದುಕೊಳ್ಳಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಪೊಲೀಸರು ಸಹ ಸ್ವಾಮೀಜಿ ಅವರ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ವಿಧಾನಸೌಧದಲ್ಲಿ ಕಾಂಗ್ರೆಸ್‌ ಜಿದಾಬಾದ್‌ ಎಂಬ ಹೇಳಿಕೆ ನೀಡಿದ್ದ ಸಂಸದರ ವಿರುದ್ಧಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುತ್ತಿರಾ? ಆದರೆ ಯಾಕಿನ್ನೂ ಆ ಬಗ್ಗೆ ಕ್ರಮ ಜರುಗಿಸಿಲ್ಲ? ನೀವು ಸತ್ಯವಾಗಿಯೂ ಕಾನೂನು ಪಾಲಕರಾಗಿದ್ದರೆ ನಾನು ಸಾಷ್ಟಾಂಗ ನಮಸ್ಕರಿಸುತ್ತಿದ್ದೆ ಎಂದಿದ್ದಾರೆ.

Tags:
error: Content is protected !!