ಕನ್ನಡಕ್ಕೂ ಕಣ್ಣಾಸ್ಪತ್ರೆಗೂ ನಿಕಟ ಸಂಬಂಧ: ಕನ್ನಡಿಗರ ಒಳಗಣ್ಣು ತೆರೆಯಬೇಕು. ನಗರದಲ್ಲಿ ‘ಎಎಸ್‌ಜಿ ಎಂಬ (ಅಪ್ರಸಿದ್ಧ) ನೇತ್ರಾಸ್ಪತ್ರೆಯೊಂದಿದೆ. ಅದು ನ.1ರಂದು ರಾಜ್ಯೋತ್ಸವವನ್ನು ಅಭಿಮಾನ ಪೂರ್ವಕ ಆಚರಿಸಿ, ನನ್ನಿಂದ ಧ್ವಜಾರೋಹಣ ಮಾಡಿಸಿ, ನನ್ನನ್ನು ಸನ್ಮಾನಿಸಿದ ಮಹತ್ವದ ಸಂಗತಿಯನ್ನು ಇಲ್ಲಿ ತಿಳಿಸ ಬಯಸುತ್ತೇನೆ.
ಹಾಗೆ ನೋಡಿದರೆ, ಕನ್ನಡಕ್ಕೂ ಒಟ್ಟಿನಲ್ಲಿ ಆಸ್ಪತ್ರೆಗೂ ನಂಟು ಎನ್ನಬಹುದು. ಕನ್ನಡದ ಕನ್ನಡಿಗರ- ಅನೇಕ ಕಾಯಿಲೆಗಳು ಪರಿಹೃತವಾಗಬೇಕು; ನಿರಭಿಮಾನ ಒಂದು ತೀವ್ರ ಅಸ್ವಸ್ಥತೆ!
ಕಾಲಾಯ…
ನಿರೀಕ್ಷೆ ತಲೆಕೆಳಗಾಗಿ,
ಗೆದ್ದು ಬೀಗಿದ ಟ್ರಂಪ್,
ಸೋತು ಬಾಗಿದ ಕಮಲಾ
ಎಲ, ಎಲಾ!
ಕೆಟ್ಟುಹೋಯಿತೆ ಕಾಲ?
ಸಿಪಿಕೆ, ಮೈಸೂರು