Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

208 ಕೋಟಿ ರೂ.ವೆಚ್ಚದಲ್ಲಿ ಬಲವರ್ಧನಾ ಕಾಮಗಾರಿ

ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಸ್ಕ್‌ ಮುಂಜಾಗ್ರತಾ ಕ್ರಮ; ಶೀಘ್ರದಲ್ಲೇ ಕಾಮಗಾರಿ ಆರಂಭ

ನವೀನ್ ಡಿಸೋಜ

ಮಡಿಕೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಉಪ ಕೇಂದ್ರಗಳ ಸ್ಥಾಪನೆಯ ಜೊತೆಗೆ 206 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ ಜಾಲದ ಬಲವರ್ಧನಾ ಕಾಮಗಾರಿಗೆ ಸೆಸ್ ಮುಂದಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

ಇತ್ತೀಚೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿದ್ಯುತ್‌ ಸಮಸ್ಯೆಯಾಗುತ್ತಿದ್ದು, ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 13 ಕಡೆಗಳಲ್ಲಿ ಉಪಕೇಂದ್ರಗಳ ಸ್ಥಾಪನೆ ಮಾಡುವುದಲ್ಲದೇ 208 ಕೋಟಿ ರೂ ವೆಚ್ಚದಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ವಿದ್ಯುತ್‌ ಜಾಲದ ಬಲರ್ವಧನೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.

ಸೋಮುವಾರಪೇಟೆ, ಮಾದಾಪುರ, ಮೂರ್ನಾಡು, ಹುದಿಕೇರಿ, ಬಾಳೆಲೆ, ಸಿದ್ದಾಪುರ, ಕೂಡಿಗೆ, ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಕಾಟಕೇರಿ, ಕಳತ್ಮಾಡು, ಮರುಗೋಡು, ಭಾಗಮಂಡಲ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಈಗಾಗಲೇ ಇಲಾಖೆ ಸಮ್ಮತಿಸಿದ್ದು, ಹುದಿಕೇರಿ, ಬಾಳಲೆ, ಸಿದ್ದಾಪುರ ಮತ್ತು ಮೂರ್ನಾಡುಗಳಲ್ಲಿ 66 ಕೆ.ಪಿ ವಿದ್ಯುತ್‌ ಉಪಕೇಂದ್ರದ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆಯೂ ಶುರುವಾಗಿದೆ.

ಭಾಗಮಂಡಲ ಮತ್ತು ಸಂಪಾಜೆ ಕೇಂದ್ರಗಳಲ್ಲಿ ವಿದ್ಯುತ್‌ ಉಪಕೇಂದ್ರದ ಸ್ಥಾಪನೆ ಮಾಡಲು ಅರಣ್ಯ ಜಾಗದಲ್ಲಿಯೇ ಹೆಚ್ಚಿನ ಭಾಗ ವಿದ್ಯುತ್ ಲೈನ್ ಹಾದು ಹೋಗಬೇಕಾಗಿರುವುದರಿಂದ ಅಲ್ಲಿ 56 ಕೆ.ವಿ ಬದಲು 33 ಕೆ.ವಿ ವಿದ್ಯುತ್

ಉಪಕೇಂದ್ರ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿಗೆ 66 ಕೆ.ವಿ. ವಿದ್ಯುತ್ ಉಪಕೇಂದ್ರ ಅತ್ಯಗತ್ಯವಾಗಿ ಬೇಕಾಗಿರುವ ಬಗ್ಗೆ ಶಾಸಕರು, ಅಧಿಕಾರಿಗಳು ಇಲಾಖೆಯ ಪ್ರಮುಖರ ಗಮನ ಸೆಳೆದ ಹಿನ್ನೆಲೆಯಲ್ಲಿ ಈಗ ಅಲ್ಲಿಯೂ 66 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ.

ಭಾಗಮಂಡಲಕ್ಕೆ ಹಾದುಹೋಗುವ ವಿದ್ಯುತ್ ಲೈನ್ ಹೆಚ್ಚು ಭಾಗ ಖಾಸಗಿ ತೋಟಗಳಲ್ಲಿ ಹಾದು ಹೋಗುವಂತಿದ್ದು, ಸಂಪಾಜೆಗೆ ಹೆಚ್ಚು ಅರಣ್ಯ ಪ್ರದೇಶ ಸಿಗುತ್ತದೆ.

ಹೀಗಾಗಿ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ಕೋರಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜಿಲ್ಲೆಯಾದ್ಯಂತ ವಿದ್ಯುತ್‌ ವಾಹಕಗಳು, ಟ್ರಾನ್ಸ್‌ಫಾರಂಗಳ ಬದಲಾವಣೆ, ವಿದ್ಯುತ್‌ ಜಾಲದ ಬಲವರ್ಧನೆಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಐದೂ ತಾಲ್ಲೂಕುಗಳಲ್ಲಿ ಒಟ್ಟು 208 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯಲಿದೆ.
ಜಿಲ್ಲೆಯಲ್ಲಿ ಒಟ್ಟು 540 ಕಿ.ಮೀ. ಎಚ್‌.ಟಿ. ಲೈನ್ ಬದಲಾವಣೆ, 1,640 ಕಿ.ಮೀ. ಇನ್ಶೂಲೇಷನ್ ಆಗಿರುವ ಎಚ್‌ಟಿ ವಾಹಕಗಳ ಅಳವಡಿಕೆ, 218 ಕಿ.ಮೀ ಎಬಿ ಕೇಬಲ್ ಬಳಸಿ ಎಲ್.ಟಿ. ಲೈನ್ ಬದಲಾಯಿಸುವುದು, 25 ಕೆ.ವಿ.ಎ., 63 ಕೆ.ವಿ.ಎ. ಮತ್ತು 100 ಕೆ.ವಿ.ಎ. ಸೇರಿದಂತೆ ಒಟ್ಟು 497 ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ (ಬದಲಾವಣೆ) ಕಾಮಗಾರಿಗಳು ಈ ಯೋಜನೆಯಲ್ಲಿದೆ.

ಈ ಎಲ್ಲ ಕಾಮಗಾರಿಗಳಿಗೆ ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಕೊಡಗಿನಲ್ಲಿ ಈ ಬಾರಿ ಮಳೆಯಿಂದ ಇಲಾಖೆಗೆ ಅಂದಾಜು 5 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ಒಟ್ಟು 203 ಕೋಟಿ ರೂ. ವೆಚ್ಚದ ವಿದ್ಯುತ್‌ ಚಾಲ ಬಲವರ್ಧನೆ ಮುಂದಾಗಿದ್ದೇವೆ. ಎಸ್ಟೇಟ್ ಮತ್ತು ಅರಣ್ಯದೊಳಗಿನ ವಿದ್ಯುತ್ ಲೈನ್‌ಗಳನ್ನು ರಸ್ತೆ ಬದಿಗೆ ತರುವುದೂ ಸೇರಿದಂತೆ ಹಲವು ಕಾಮಗಾರಿಗಳಾಗಲಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಕಾಮಗಾರಿ ಆರಂಭವಾಗಲಿದೆ.”

-ಶೀಲಾ, ವ್ಯವಸ್ಥಾಪಕ ನಿರ್ದೇಶಕಿ, ಸೆಸ್ಕ್‌ 

 

Tags: