Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಚನ್ನಪಟ್ಟಣ ಉಪ ಚುನಾವಣೆ: ಗೆದ್ದ ಸೈನಿಕ, ಹ್ಯಾಟ್ರಿಕ್‌ ಸೋಲು ಕಂಡ ನಿಖಿಲ್‌

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ.  ಇತ್ತ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹ್ಯಾಟ್ರಿಕ್‌ ಸೋಲು  ಅನುಭವಿಸಿದ್ದಾರೆ.

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಇಂದು (ನ.23) ಹೊರಬಿದ್ದಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯೂ 20 ಸುತ್ತುಗಳಲ್ಲಿ ನಡೆದಿದೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್‌, ಹಿನ್ನೆಡೆಯತ್ತ ಮುಖ ಮಾಡಿದರು.

ಹಾವು-ಏಣಿ ಆಟದಂತಿದ್ದ ಫಲಿತಾಂಶ 9ನೇ ಸುತ್ತಿನ ನಂತರ ಬದಲಾಯಿತು.  ಇಲ್ಲಿಂದ ಮುನ್ನಡೆ ಕಾಯ್ದುಕೊಂಡ  ಕಾಂಗ್ರೆಸ್‌ ಅಭ್ಯರ್ಥಿ ಸಿಪಿವೈ ಕೊನೆಯವರೆಗೂ ಉಳಿಸಿಕೊಂಡು  25, 357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಂತಿಮವಾಗಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ 1,12,388 ಮತಗಳನ್ನು ಪಡೆದರೆ, ಎನ್‌ಡಿಎ ಅಭ್ಯರ್ಥಿ ನಿಖಿಲ್‌ 87,031 ಮತಗಳನ್ನು ಪಡೆದಿದ್ದಾರೆ.  ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.

Tags: