ಆ್ಯಪಲ್ ಕಂಪೆನಿಯು ಎಂ4 ಚಿಪ್ ಸೆಟ್ ಸರಣಿಯೊಂದಿಗೆ ಹೊಸ ಮ್ಯಾಕ್ ಬುಕ್ ಪ್ರೋಅನ್ನು ಬಿಡುಗಡೆ ಮಾಡಿದೆ. ಈ ಲೇಟೆಸ್ಟ್ ಮ್ಯಾಕ್‌ಬುಕ್ ಪ್ರೊ 14 ಮತ್ತು 16 ಇಂಚಿನ ಎರಡೂ ಗಾತ್ರಗಳಲ್ಲಿ ಲಭ್ಯವಿದು, ಲಿಕ್ವಿಡ್ ಲಿಟನಾ XDR ಡಿಎಸ್‌ಪ್ಲೆ ಜತೆಗೆ ಎಲ್ಲ ಹೊಸ ನ್ಯಾನೊ ಟೆಕ್ಸ್‌ಚರ್ ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದೆ, ಅಲ್ಲದೆ ವಿಡಿಯೋ ಕರೆಗಳಿಗಾಗಿ 12ಎಂಪಿ ಸೆಂಟರ್ ಸ್ಟೇಜ್ ಕ್ಯಾಮೆರಾಗಳನ್ನು ಹೊಂದಿದೆ. ಈ ಹೊಸ ಮ್ಯಾಕ್‌ಬುಕ್ ಮೂರು ಎಂ4 ಸಿಲಿಕಾನ್ ಗಳೊಂದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ ಎಂ4, ಎಂ4 ಪ್ರೊ ಮತ್ತು ಟಾಬ್ ಎಂಡ್ ಎ04 ಮ್ಯಾಕ್ಸ್, ಈ ಹೊಸ ಮ್ಯಾಕ್ ಮಾದರಿಗಳು 24 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯ ಸಾಮರ್ಥ್ಯವನ್ನು ಹೊಂದಿದ್ದು, ಈ ಸಾಧನಗಳಲ್ಲಿ ಮ್ಯಾಕೋಸ್ ಸಿಸ್ಟೋಯಾ 15.1 ರನ್ ಆಗುತ್ತದೆ. ಇದು ಎಲ್ಲ ಆ್ಯಪಲ್ ಇಂಟೆಲಿ ಟೆಸ್ಟ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸಾಮಾನ್ಯ 14 ಇಂಚಿನ ಮಾನ್ ಬುಕ್ ಪ್ರೊ (ಎಂ4 ಜತೆಗೆ) 1,69,900 ರೂ.ಗಳಿಂದ ಆರಂಭವಾಗಲಿದ್ದು, ಶಿಕ್ಷಣದ ವಿವಿಧ ಯೋಜನೆಗಳ ಮೂಲಕ ಸಮಾಚಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ 1,59,900 ರೂ.ಗಳಿಂದ ಆರಂಭವಾಗಲಿದೆ.
16 ಇಂಚಿನ ಮ್ಯಾಕ್ ಬುಕ್ ಪ್ರೊ ಮಾದರಿಗಳು (ಎಂ4 ಪ್ರೊ ಜತೆಗೆ) 1,99,900 ರೂ.ಗಳಿಂದ ಪ್ರಾರಂಭವಾಗಲಿದ್ದು, ಶಿಕ್ಷಣದ ಯೋಜನೆಯ ಮೂಲಕ 1,84,900 ರೂಗಳಿಂದ ಆರಂಭವಾಗಲಿದೆ. ಇನ್ನು ಟಾಪ್ ಎಂಡ್ 16- ಇಂಚಿನ ಮ್ಯಾಕ್ ಬುಕ್ ಪ್ರೊ ಮಾಡೆಲ್‌ಗಳು (ಎಂ4 ಪ್ರೊ ಜತೆಗೆ) 2,49,900 ರೂ.ಗಳಿಂದ ಆರಂಭವಾಗುವ ಬೆಲೆಗಳಲ್ಲಿ ಲಭ್ಯವಿದೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ 2,29,900 ರೂ.ಗಳಿಂದ ಲಭ್ಯವಾಗಲಿದೆ.