Mysore
29
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮಗನ ಹೆಸರಲ್ಲಿ ಕುಮಾರಸ್ವಾಮಿ ಸಾವಿರಾರು ಕೋಟಿ ಕಲೆಕ್ಟ್‌ ಮಾಡವ್ರೆ: ಚಲುವರಾಯಸ್ವಾಮಿ ಆರೋಪ

ಮಂಡ್ಯ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಗನ ಚುನಾವಣೆ ಹೆಸರು ಹೇಳಿ ಅನೇಕ ಖಾಸಗಿ ಕಂಪನಿಗಳಿಂದ ಸಾವಿರಾರು ಕೋಟಿ ಕಲೆಕ್ಟ್‌ ಮಾಡಿದ್ದಾರೆ ಎಂದು ಸಚಿವ ಎನ್‌.ಚಲುರಾಯಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಇಂದು(ನ.18) ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಬಂದಿರುವ ಪ್ರಕಾರ, ಮಗನ ಚುನಾವಣೆಯೆಂದು ಹೇಳಿ ಹಲವು ಖಾಸಗಿ ಕಂಪನಿಗಳಿಂದ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣ ಪಡೆದಿರುವುದು ಸತ್ಯ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರಿಗೆ ಬೇರೆ ಸಮಯದಲ್ಲಿ ಹಣ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಗನ ಚುನಾವಣೆಗೆ ಸಮಯದಲ್ಲಿ ಸಿಗುತ್ತದೆ ಬಿಡ್ರಿ.. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲುತ್ತೇವೆ ಎಂದರ್ಥವಲ್ಲ. ಏನೇ ಆಗಲಿ, ಹಣ ಹಂಚಿಕೆ ಮಾಡಿದಾಕ್ಷಣ ಚುನಾವಣೆ ಗೆಲ್ಲುತ್ತಾರೆ ಎಂಬನಿರೀಕ್ಷೆ  ಅಸಾಧ್ಯ ಎಂದು ಕುಮಾರಸ್ವಾಮಿಗೆ ಟಾಂಗ್‌ ನೀಡಿದರು.

ನಾವು ಮತದಾರರ ಬಳಿ ಹೋಗಿದ್ದೇವೆ. ದಯವಿಟ್ಟು ಮತ ನೀಡಿ, ನಾವು ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ದುಡಿಯುತ್ತೇವೆ ಎಂದು ಮನವಿ ಮಾಡಿ ಮತ ಕೇಳಿದ್ದೇವೆ ಎಂದು ತಿಳಿಸಿದರು.

Tags:
error: Content is protected !!