Mysore
16
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮಸ್ಕ್‌ ಜೊತೆ ಒಪ್ಪಂದ: ಪ್ರಥಮ ಬಾರಿಗೆ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ ಎಕ್ಸ್‌ ಕಂಪನಿಯ ರಾಕೆಟ್‌ ಬಳಸಿ ಪ್ರಥಮ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೂ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಯೋಜನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್‌ರೊಂದಿಗೆ ಇಸ್ರೋದ ಮೊಟ್ಟ ಮೊದಲ ಒಪ್ಪಂದವಾಗಿದೆ. ಇಸ್ರೋ ಹಾಗೂ ಸ್ಪೇಸ್‌ ಎಕ್ಸ್‌ ಮಧ್ಯೆ ಹಲವು ವಾಣಿಜ್ಯ ಸಹಯೋಗಗಳಲ್ಲಿ ಒಂದಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೋದ ವಾಣಿಜ್ಯ ವಿಭಾಗದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ರಾಧಾಕೃಷ್ಣನ್‌ ದುರೈರಾಜ್‌ ಅವರು, ಸ್ಪೇಸ್‌ ಎಕ್ಸ್‌ನೊಂದಿಗೆ ಉಡಾವಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇಸ್ರೋದ ಉಪಗ್ರಹವನ್ನು ಸ್ಪೇಸ್‌ ಎಕ್ಸ್‌ನ ಫಾಲ್ಕನ್‌ 9 ರಾಕೆಟ್‌ನ್ನು ನಭಕ್ಕೆ ಒತ್ತೊಯ್ಯೊಯಲಿದ್ದು, ಅಮೆರಿಕಾದ ಕೇಪ್‌ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದೆ. ಈ ಉಡಾವಣೆಗೆ ಅಂದಾಜು 60-70 ಮಿಲಿಯನ್‌ ಡಾಲರ್‌ಗಳಷ್ಟು ವೆಚ್ಚ ತಗುಲಿದೆ. ಅಲ್ಲದೇ ಜಿಎಸ್‌ಎಟಿ-ಎನ್‌2 ಅಥವಾ ಜಿಎಸ್‌ಎಟಿ-20 ಹೆಸರಿನ ಉಪಗ್ರಹವು ಭಾರತದಲ್ಲಿ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣಿಸುವಾಗ ಇಂಟರ್‌ನೆಟ್‌ ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ ಭಾರತದಲ್ಲಿ ವಿಮಾನದಲ್ಲಿ ಪ್ರಯಾಣಿಸುವಾಗ ಇಂಟರ್‌ನೆಟ್‌ ಸೇವೆಗೆ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಅಲ್ಲದೇ ಈ ಸೇವೆಯನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶದ ಮೇಲೆ ಹಾರುವಾಗ ಅದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಹೀಗಾಗಿ ಭಾರತ ಸರ್ಕಾರವು ನವೆಂಬರ್‌.4 ರಂದು ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಭಾರತೀಯ ವಾಯುಪ್ರದೇಶ ಒಳಗಡೆ ವಿಮಾನದಲ್ಲಿ 3,000 ಮೀಟರ್‌ ಎತ್ತರವನ್ನು ತಲುಪಲಿದೆ. ಬಳಿಕ ವಿಮಾನದಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಲು ಅನುಮತಿ ನೀಡಿದಾಗ ಮಾತ್ರ ಪ್ರಯಾಣಿಕರು ವಿಮಾನದಲ್ಲಿ ವೈ-ಫೈ ಮುಖಾಂತರ ಇಂಟರ್‌ನೆಟ್‌ ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ ಎಂದು ಹೇಳಿದೆ.

Tags:
error: Content is protected !!