Mysore
32
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಜಾಮೀನಿಗೆ ಶ್ಯೂರಿಟಿ ನೀಡಿದವರಾರು?

ಬೆಂಗಳೂರು: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದ್ದು, ಶ್ಯೂರಿಟಿ ಅನ್ನು ಸಹೋದರ ದಿನಕರ್‌ ಹಾಗೂ ನಟ ಧನ್ವೀರ್‌ ನೀಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್‌ಗೆ ಇಂದು ಹೈಕೋರ್ಟ್‌ 6 ವಾರಗಳ ಕಾಲ ಷರತ್ತು ಬದ್ಧ ಮಧ್ಯಂತರ ಜಾಮೀನು ವಿಧಿಸಿತ್ತು. ಈ ಹಿನ್ನೆಲೆ ಕೋರ್ಟ್‌ ಜಾಮೀನನ ಷರತ್ತುಗಳಲ್ಲಿ ಶ್ಯೂರಿಟಿ ನೀಡುವಂತೆ ಆದೇಶ ನೀಡಿತ್ತು.

ಕೋರ್ಟ್‌ನ ಆದೇಶದ ಅನ್ವಯ ಶ್ಯೂರಿಟಿದಾರರಾಗಿ ದರ್ಶನ್‌ ತಮ್ಮ ಸಹೋದರ ಹಾಗೂ ದರ್ಶನ್‌ ಆಪ್ತ ಸ್ನೇಹಿತ ನಟ ಧನ್ವೀರ್‌ 57ನೇ ಸಿಸಿಎಚ್‌ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಜೈ.ಶಂಕರ್‌ ಅವರ ಸಮ್ಮುಖದಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

Tags:
error: Content is protected !!