Mysore
19
scattered clouds

Social Media

ಗುರುವಾರ, 02 ಜನವರಿ 2025
Light
Dark

ಬಂಡೀಪುರ ಅರಣ್ಯದಲ್ಲಿ ಕಾಡಾನೆಗಳ ಚೆಂದದ ಗುದ್ದಾಟ

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡೀಪುರ ಅರಣ್ಯದಲ್ಲಿ ಕಾಡಾನೆಗಳು ಚೆಂದದ ಗುದ್ದಾಟ ನಡೆಸಿದ್ದು, ಈ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂದು ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಆನೆಗಳ ಗುದ್ದಾಟದ ದೃಶ್ಯ ಕಾಣಸಿಕ್ಕಿದೆ.

ಅರಣ್ಯದೊಳಗೆ ಇದ್ದ ಕೆರೆಯೊಂದರಲ್ಲಿ ಕಾಡಾನೆಗಳು ಮೈ ಉಜ್ಜಿಕೊಂಡು ಒಂದಕ್ಕೊಂದು ಗುದ್ದಾಡಿಕೊಂಡಿವೆ. ಇದನ್ನು ನೋಡಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಫುಲ್ ಖುಷ್‌ ಆಗಿದೆ.

ಈ ಆನೆಗಳ ಗುದ್ದಾಟದ ಫೋಟೋವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡು, ಮೊಬೈಲ್‌ನಲ್ಲಿಯೂ ಕೂಡ ವಿಡಿಯೋ ಮಾಡಿಕೊಂಡಿದ್ದಾರೆ.

 

Tags: