Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

job allert: ಅಂಚೆ ಪೇಮೆಂಟ್ ಬ್ಯಾಂಕ್​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು: ಭಾರತೀಯ ಅಂಚೆ ಪೇಮೆಂಟ್ಸ್‌ ಬ್ಯಾಂಕ್(ಐಪಿಪಿಬಿ) 2024ನೇ ಸಾಲಿನಲ್ಲಿ ಮತ್ತೊಂದು ನೇಮಕಾತಿ ಪ್ರಕಟಿಸಿದೆ. ದೇಶದ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ  ಎಕ್ಸಿಕ್ಯೂಟಿವ್(ಕಾರ್ಯನಿರ್ವಹಕ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಕರೆದಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯ ಅಂಚೆ ಪೇಮೆಂಟ್ಸ್‌ ಬ್ಯಾಂಕ್ಸ್‌  ಲಿಮಿಟೆಡ್ (ಐಪಿಪಿಬಿ) ಗ್ರಾಮೀಣ ಡಾಕ್ ಸೇವಕ್ ನಲ್ಲಿ,  344 ಕಾರ್ಯನಿರ್ವಾಹಕ ಹುದ್ದೆಗಳು ಖಾಲಿಯಿದ್ದು, ಈ ಲಿಂಕ್‌ ಬಳಸಿ  https://www.ippbonline.com/ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ
ಹುದ್ದೆಗಳು : ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು : 344

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 11 ರಿಂದ 31, 2024

ವೇತನ : ತಿಂಗಳಿಗೆ 30,000 ರೂ.
ಅರ್ಜಿ ಶುಲ್ಕ : 750 ರೂ.

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು
ಅಭ್ಯರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆ / ಮಂಡಳಿಯಿಂದ ಯಾವುದೇ ವಿಷಯದಲ್ಲಿ (ನಿಯಮಿತ / ದೂರಶಿಕ್ಷಣ) ಪದವಿ ಪಡೆದಿರಬೇಕು. (ಅಥವಾ) ಸರ್ಕಾರಿ ನಿಯಂತ್ರಣ ಸಂಸ್ಥೆಯಿಂದ ಅನುಮೋದಿಸಲ್ಪಟ್ಟಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 2 ವರ್ಷಗಳ ಕಾಲ ಗ್ರಾಮೀಣ ಡಾಕ್ ಸೇವಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.

ಒಬಿಸಿ ಅಭ್ಯರ್ಥಿಗಳು 38 ವರ್ಷದವರೆಗೆ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 40 ವರ್ಷದವರೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

Tags:
error: Content is protected !!