ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಕುರಿತು ಎಸ್ ಐಟಿ ಹಾಗೂ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇ.ಡಿ. ಅಧಿಕಾರಿಗಳ ತನಿಖಾ ವರದಿಯಲ್ಲಿ ಮಾಜಿ ಸಚಿವ ನಾಗೇಂದ್ರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರೆ, ಎಸ್‌ಐಟಿ ಅಧಿಕಾರಿಗಳ ವರದಿಯಲ್ಲಿ ಅವರ ಹೆಸರೇ ಇಲ್ಲದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇ.ಡಿ. ಅಧಿಕಾರಿಗಳ ವರದಿಯಲ್ಲಿ ಈ ಪ್ರಕರಣದ ಪ್ರಮುಖ ಆರೋಪಿ ನಾಗೇಂದ್ರ ಎಂಬುದು ಸ್ಪಷ್ಟವಾಗಿ ದಾಖಲಾಗಿದೆ. ಅಲ್ಲದೆ ಅವರ ಅದೇಶದಂತೆಯೇ ಹಣಕಾಸಿನ ವ್ಯವಹಾರ ನಡೆದಿರುವುದೂ ಬೆಳಕಿಗೆ ಬಂದಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ನಾಗೇಂದ್ರ ಅವರ ಹೆಸರನ್ನೇ ಕೈಬಿಟ್ಟು ವರದಿ ಸಿದ್ಧಪಡಿಸಿರುವುದನ್ನು ನೋಡಿದರೆ ಉದ್ದೇಶ ಪೂರ್ವಕವಾಗಿಯೇ ನಾಗೇಂದ್ರ ಅವರಿಗೆ ರಕ್ಷಣೆ ನೀಡಲಾಗುತ್ತಿದೆಯೇನೋ ಎಂಬ ಅನುಮಾನ ಕಾಡುತ್ತದೆ.
ಒಂದು ವೇಳೆ ಈ ಹಗರಣದಲ್ಲಿ ನಾಗೇಂದ್ರರವರು ಭಾಗಿಯಾಗಿಲ್ಲ ಎನ್ನುವುದಾದರೆ ಅವರಿಂದ ರಾಜೀನಾಮೆ ಪಡೆದ್ದಿದ್ದಾರೂ ಏಕೆ? ಆದ್ದರಿಂದ ಸರ್ಕಾರ ಪಾರದರ್ಶಕವಾಗಿ ಈ ಪ್ರಕರಣದ ತನಿಖೆ ಮಾಡಬೇಕಿದೆ.
-ಎ.ಎಸ್.ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.