Mysore
25
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹುನುಗನಹಳ್ಳಿಯ ಸತೀಶ್ ಗೌಡ ಕೃಷಿಗೂ ಸೈ… ಸಂಘಟನೆಗೂ ಜೈ

ಮಂಜು ಕೋಟೆ
ಕನ್ನಡ ಭಾಷೆಯ ಉಳಿವಿಗಾಗಿ, ಕರ್ನಾಟಕದ ರಕ್ಷಣೆ ಗಾಗಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಜಯ ಕರ್ನಾಟಕ ರಕ್ಷಣಾ ವೇದಿಕೆಯ ಕೆಲಸ-ಕಾರ್ಯ ಕ್ರಮಗಳಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯವಾಗಿ ತಮ್ಮನ್ನು ತೊಡಗಿಕೊಳ್ಳುವ ಜತೆಗೆ ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾಗಿ ಎಚ್‌.ಡಿ. ಕೋಟೆಯ ಶಾಸಕ ಅನಿಲ್ ಚಿಕ್ಕಮಾದುರವರ ಒಡನಾಟದೊಂದಿಗೆ ರಾಜಕೀಯ ರಂಗದಲ್ಲಿಯೂ ಗುರುತಿಸಿ ಕೊಂಡಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಹುನುಗನಹಳ್ಳಿ ಸತೀಶ್ ಗೌಡ ಅವರು, ರೈತರಿಗೆ ‘ಕೃಷಿಯೇ ಖುಷಿ’ ಎಂಬ ನಾಣ್ಣುಡಿಯಂತೆ ಕೆಲ ವರ್ಷಗಳಿಂದ ಕೃಷಿ ಚಟುವಟಿಕೆ ಯಲ್ಲಿ ತೊಡಗಿಕೊಂಡಿದ್ದು, ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹುನುಗನಹಳ್ಳಿ ಗ್ರಾಮದ ನರಸಿಂಹೇಗೌಡ ಮತ್ತು ನಾಗರತ್ನ ದಂಪತಿಯ ಮೂರು ಜನ ಮಕ್ಕಳಲ್ಲಿ ಸತೀಶ್ ಗೌಡ ಕೊನೆಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುನುಗನಹಳ್ಳಿ ಹಾಗೂ ಬೀಚನಹಳ್ಳಿ ಶಾಲೆಗಳಲ್ಲಿ ಮುಗಿಸಿದ ಅವರು, ಮೈಸೂರಿನ ಮಹಾಜನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮತ್ತು ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ್ದಾರೆ.

ಶಾಲಾ ಹಂತದ ಶಿಕ್ಷಣ ಪಡೆಯುವಾಗಲೇ ತಂದೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವು ದರ ಮೂಲಕ ಕೃಷಿ ಬಗೆಗೆ ಒಲವನ್ನು ಮೈಗೂಡಿಸಿ ಕೊಂಡಿದ್ದ ಸತೀಶ್ ಗೌಡರ ಮನಸ್ಸು ನಂತರ ವಾಲಿದ್ದು, ಕನ್ನಡಪರ ಹೋರಾಟ, ಕನ್ನಡಿಗರ ಸಂಘಟನೆಯತ್ತ. ಪ್ರಸ್ತುತ ಜಯಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಅವರು, ಕಳೆದ 15 ವರ್ಷಗಳಿಂದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದು, ಕಳೆದ 5 ವರ್ಷಗಳಿಂದ ಶಾಸಕ ಅನಿಲ್ ಚಿಕ್ಕಮಾದು ಅವರ ಜತೆಗೂಡಿ ಕಾಂಗ್ರೆಸ್‌ ಪಕ್ಷವನ್ನು ತಾಲ್ಲೂಕಿನಲ್ಲಿ ಬಲಪಡಿಸಲು ಶ್ರಮಿಸುತ್ತಿದ್ದಾರೆ.

ಹುಟ್ಟೂರನ್ನು ಮರೆಯಬಾರದು ಎಂದು ತಮ್ಮೂರಿನಲ್ಲಿಯೇ ಕುಟುಂಬದಿಂದ ಬಂದ 5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಇವರು, ಬಳಿಕ ಹೆಚ್ಚುವರಿಯಾಗಿ 4 ಎಕರೆ ಜಮೀನನ್ನು ಖರೀದಿಸಿ ಒಟ್ಟಾರೆ 9 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಸದ್ಯ ಜಮೀನಿನಲ್ಲಿ ತೆಂಗು, ಬಾಳೆ, ಅಡಕೆ ಬೆಳೆಗಳನ್ನು ಬೆಳೆದಿದ್ದು, ಇವುಗಳ ಜತೆಗೆ ಜಾಯಿಕಾಯಿ, ಸಾಗುವನಿ, ಹಲಸು ಸೇರಿದಂತೆ ಅನೇಕ ಹಣ್ಣಿನ ಗಿಡಗಳನ್ನೂ ಬೆಳೆದಿದ್ದಾರೆ. ಸಾವಯವ ಕೃಷಿ ಪದ್ಧತಿಯನ್ನೇ ಹೆಚ್ಚಾಗಿ ಅವಲಂಬಿಸಿ ಮಿಶ್ರ ಬೇಸಾಯ ಮಾಡುತ್ತಿದ್ದಾರೆ.

ಒಂದೇ ಬೆಳೆ ನೆಚ್ಚಿಕೊಂಡು ರೈತರು ಕೃಷಿ ಮಾಡಿದರೆ ನಷ್ಟ ಹೊಂದುವ ಅಪಾಯವಿರುತ್ತದೆ. ಮಿಶ್ರ ಬೆಳೆಯಲ್ಲಿ ಒಂದಲ್ಲ ಒಂದು ಬೆಳೆ ಲಾಭ ತಂದುಕೊಂಡುತ್ತದೆ. ಅಲ್ಲದೆ ಇತ್ತೀಚೆಗೆ ಹಳ್ಳಿಗಾಡಿನ ಯುವಕರು ದುಶ್ಚಟಗಳಿಗೆ ಜೋತು ಬಿದ್ದು ದುಡಿಮೆಯನ್ನೇ ಮರೆಯುತ್ತಿದ್ದಾರೆ. ಅವರೆಲ್ಲರಿಗೂ ಮಾದರಿಯಾಗಬೇಕು ಎನ್ನುವುದು ನನ್ನ ಉದ್ದೇಶ. ಪ್ರಸ್ತುತ ನಾನು ಮೈಸೂರಿನಲ್ಲಿ ನೆಲೆಸಿದ್ದರೂ, ರಾಜಕೀಯ ಹಾಗೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರೂ ವಾರದಲ್ಲಿ 3-4 ದಿನ ಜಮೀನಿಗೆ ಬಂದು ಕೆಲಸ ಮಾಡುತ್ತೇನೆ ಎಂದರೆ ಇದರಲ್ಲಿ ಲಾಭವಿದೆ, ನಾವು ಕಷ್ಟಪಟ್ಟು ದುಡಿಯಬೇಕು ಎಂಬ ಮನಸನ್ನು ಯುವಕರಲ್ಲಿ ಮೂಡಿಸಬೇಕು. ಈ ನಿಟ್ಟಿನಲ್ಲಿ ನನ್ನ ಜಮೀನಿನಲ್ಲಿಯೂ 3-4 ಯುವಕರಿಗೆ ಉದ್ಯೋಗ ನೀಡಿದ್ದೇನೆ ಎನ್ನುತ್ತಾರೆ ಸತೀಶ್ ಗೌಡ.

ಕೃಷಿ ಮಾಡುವುದು ಒಂದು ಹವ್ಯಾಸವಲ್ಲ. ಇದು ಒಂದು ಉದ್ಯೋಗ, ನಾವು ಯಾವುದೇ ಕೆಲಸಗಳನ್ನು ಮಾಡುತ್ತಿದ್ದರೂ ಒಂದಲ್ಲ ಒಂದು ದಿನ ಕೃಷಿಗೆ ಮರಳಬೇಕು ಎಂಬುದಕ್ಕೆ ಸತೀಶ್ ಗೌಡ ಉದಾಹರಣೆಯಾಗಿದ್ದಾರೆ. ಸದ್ಯ ಕೃಷಿಯಲ್ಲಿ ವಾರ್ಷಿಕ 10 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಾ 15 ಲಕ್ಷ ರೂ. ಆದಾಯ ಪಡೆಯುತ್ತಿರುವ ಸತೀಶ್ ಗೌಡರವರು ಹೈನುಗಾರಿಕೆ ಮಾಡುವುದಕ್ಕೂ ಯೋಜನೆಗಳನ್ನು ರೂಪಿಸಿ ಕೊಳ್ಳುತ್ತಿದ್ದಾರೆ. ಕೃಷಿ ಮಾಡುವುದರಿಂದ ದೈಹಿಕವಾಗಿ, ಮಾನಸಿಕ ವಾಗಿ ಆರೋಗ್ಯವಾಗಿ ರಲು ಸಾಧ್ಯ ಎಂಬುದು ಅವರ ಅನುಭವದ ಮಾತು.

ಯಾರೂ ಜಮೀನುಗಳನ್ನು ಮಾರಾಟ ಮಾಡಬಾ ರದು. ಮುಂದಿನ ದಿನಗಳಲ್ಲಿ ಒಂದು ಎಕರೆ ಜಮೀನು ಇದ್ದವರೇ ಕೋಟ್ಯಧಿಪತಿಗಳು. ರೈತರು ತಮ್ಮ ಜಮೀನಿ ನಲ್ಲಿ ಶ್ರಮಪಟ್ಟು ದುಡಿಯಬೇಕು. ಈಗ ಒಂದು ಬೆಳೆಯಲ್ಲಿ ಲಾಭ ಪಡೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಮಿಶ್ರ ಬೇಸಾಯದತ್ತ ಗಮನ ಹರಿಸಬೇಕು. ಹೆಚ್ಚಾಗಿ ಯುವಕರು ಕೃಷಿಯತ್ತ ಮುಖ ಮಾಡಬೇಕು. ರಾಜಕೀಯದಲ್ಲಿ ಆಸಕ್ತಿ ಇದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಈ ಭಾಗದ ಅಭಿವೃದ್ಧಿ ಹಾಗೂ ರೈತರ ಪರವಾಗಿ ದುಡಿಯುವ ಹಂಬಲವಿದೆ.
– ಸತೀಶ್ ಗೌಡ, ಕೃಷಿಕ, ರಾಜ್ಯ ಉಪಾಧ್ಯಕ್ಷ, ಜಯಕರ್ನಾಟಕ ರಕ್ಷಣಾ ವೇದಿಕೆ.

 

Tags: