ಪ್ರೊ.ಆರ್.ಎಂ.ಚಿಂತಾಮಣಿ
ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಕಳೆದ ವಾರ ತನ್ನ ದೈಮಾಸಿಕ ಸಭೆಯಲ್ಲಿ ನೀತಿ ಬಡ್ಡಿ ದರಗಳನ್ನು ಯಥಾಸ್ಥಿತಿ ಮುಂದುವರಿಸುವ ಮತ್ತು ಹಣಕಾಸು ನಿಲುವನ್ನು ಉತ್ತೇಜಕ ನೀತಿಯನ್ನು ಹಿಂಪಡೆಯುವ ನಿಲುವಿನಿಂದ ‘ತಟಸ್ಥ ನಿಲುವಿ’ಗೆ ಬದಲಾಯಿಸುವ ನಿರ್ಧಾರಗಳನ್ನು ಕೈಗೊಂಡಿದೆ. ಮೂರು ಜನ ಹೊಸ ಬಾಹ್ಯ ಸದಸ್ಯರ ಹಾಜರಾತಿಯಲ್ಲಿ ನಡೆದ ಸಭೆಯಲ್ಲಿ ಬಡ್ಡಿ ದರಗಳನ್ನು ಬದಲಾಯಿಸದೇ ಇರುವ ನಿರ್ಣಯವು 5:1 ಬಹುಮತದಿಂದ ಅಂಗೀಕೃತವಾದರೆ ನಿಲುವು ಬದಲಾಯಿಸುವ ನಿರ್ಣಯ ಸರ್ವಾನುಮತದಿಂದ ಪಾಸಾಯಿತು. ಬಡ್ಡಿ ದರಗಳಿಂದ ಅರ್ಥವ್ಯವಸ್ಥೆಗೆ ಹರಿದು ಬರುವ ನಗದು ಅಥವಾ ಬಂಡವಾಳದ ಮೌಲ್ಯವನ್ನು (ಬಡ್ಡಿ ವೆಚ್ಚಗಳನ್ನು ನಿಯಂತ್ರಿಸಲಾಗುತ್ತದೆ. ಮೌಲ್ಯದ ಆಧಾರದಿಂದ ನಗದು ಹರಿವಿನ ಗಾತ್ರವೂ ನಿರ್ಧಾರವಾಗುತ್ತದೆ. ವಿವಿಧ ವಲಯಗಳಿಗೆ ಹರಿಯುವ ಪತ್ತು ಅಥವಾ ಸಾಲ (Credit) ಸಮರ್ಪಕವಾಗಿರುವಂತೆ ಹಣಕಾಸು ನೀತಿ ನಿಯಂತ್ರಿಸುತ್ತದೆ. ಇದನ್ನೇ ಬಿಗಿ, ಉದಾರ ಮತ್ತು ತಟಸ್ಥ ನಿಲುವುಗಳೆಂದು ಕರೆಯಲಾಗುವುದು.
ಈ ನಿರ್ಧಾರದಂತೆ ಮುಂದಿನ ಹಣಕಾಸು ನೀತಿ ಸಮಿತಿಯ ಸಭೆಯವರೆಗಂತು (ಡಿಸೆಂಬರ್ ಮೊದಲ ವಾರ) ನೀತಿ ಬಡ್ಡಿ ದರಗಳು (ರೆಪೊ ದರ, ತತ್ಕಾಲ ಠೇವಣಿ ಸೌಲಭ್ಯ ದರ (ಹಿಂದಿನ ರಿವರ್ಸ್ ರೆಪೊ ದರ ಮತ್ತು ಬ್ಯಾಂಕ್ ದರ) ಈಗಿದ್ದಂತೆ ಮುಂದುವರಿಯಲಿವೆ. ರಿಸರ್ವ್ ಬ್ಯಾಂಕ್ ಗವರ್ನರರ ಪ್ರಕಟಣೆ ಪ್ರಕಾರ ಹಣದುಬ್ಬರ ಮತ್ತು ಜಿಡಿಪಿ (Gross Domestic Product- ರಾಷ್ಟ್ರೀಯಒಟ್ಟಾದಾಯ) ಚಲನವಲನಗಳನ್ನು ಗಮನಿಸಿ ಅವಶ್ಯಕತೆಯನ್ನು ಅನುಸರಿಸಿ ನೀತಿ ದರಗಳನ್ನು ಕಡಿತಗೊಳಿಸಲಾಗುವುದು ಎಂಬ ಸಂದೇಶ ಅರ್ಥ ವ್ಯವಸ್ಥೆಗೆ ರವಾನೆಯಾಗಿದೆ.
ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ತಮ್ಮ ತಾತ್ಕಾಲಿಕ ಹಣಕಾಸಿನ ಅವಶ್ಯಕತೆಗಳಿಗಾಗಿ ಬೇರೆಲ್ಲಿಯೂ ಹಣಕಾಸು ಪೇಟೆಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗದಿದ್ದಾಗ ತಮ್ಮಲ್ಲಿಯ ರಿಸರ್ವ್ ಬ್ಯಾಂಕ್ ಸಾಲಪತ್ರಗಳನ್ನು ರಿಸರ್ವ್ ಬ್ಯಾಂಕಿನಲ್ಲಿಯೇ ಆಧಾರವಾಗಿಟ್ಟು ಪಡೆಯುವ ಅಲ್ಪಾವಧಿ ಸಾಲಗಳ ಮೇಲೆ ಅದು ಆಕರಿಸುವ ಬಡ್ಡಿದರ ರೆಪೊ ರೇಟ್ (Repossessi on Rate) ಈಗ ಶೇ.4.5 ಇರುತ್ತದೆ. ಹಣಕಾಸು ವ್ಯವಸ್ಥೆಗೆ ಇದು ಮಹತ್ವದ ಬಡ್ಡಿ ದರ. ಇದರ ಸುತ್ತಲೇ ಬ್ಯಾಂಕುಗಳ ಮತ್ತು ಇತರ ಹಣಕಾಸು ಸಂಸ್ಥೆಗಳ ಠೇವಣಿ ದರಗಳು ಮತ್ತು ಅವುಗಳು ಕೊಡುವ ಸಾಲಗಳ ಮೇಲಿನ ಬಡ್ಡಿ ದರಗಳು ಸುತ್ತುತ್ತಿರುತ್ತವೆ. ಹಣಕಾಸು ಪೇಟೆಗಳ ದರಗಳ ಮೇಲೂ ಇದರ ಪರಿಣಾಮವಿದೆ.
ರೆಪೊ ದರಕ್ಕೆ ಎದುರಾಗಿ ಈ ಸಂಸ್ಥೆಗಳಲ್ಲಿ ಹೆಚ್ಚುವರಿ ಹಣಕಾಸು ತಾತ್ಕಾಲಿಕವಾಗಿ ಇದ್ದು ಬೇರೆಲ್ಲಿಯೂ ಲಾಭದಾಯಕವಾಗಿ ಹೂಡಿಕೆ ಮಾಡಲಿಕ್ಕಾಗದೇ ಇದ್ದಾಗ ಬ್ಯಾಂಕುಗಳು ಅದನ್ನು ಅಲ್ಪಾವಧಿ ಠೇವಣಿಯಾಗಿ ರಿಸರ್ವ್ ಬ್ಯಾಂಕಿನಲ್ಲಿಟ್ಟಾಗ ಅದನ್ನು ತಾಲ ಠೇವಣಿ ಸೌಲಭ್ಯ (Standing Deposite Facility)ಎಂದು ಕರೆದು ಅದರ ಮೇಲೆ ರಿಸರ್ವ್ ಬ್ಯಾಂಕ್ ಕೊಡುವ ಬಡ್ಡಿ ದರವೇ ಎಸ್‌ಡಿಎಫ್ ರೇಟು (ಹಿಂದಿನ ರಿಸರ್ವ್ ರೆಪೊ ರೇಟ್). ಇದು ಈಗ ಶೇ.4.25 ಇದೆ. ಇದೇ ರೀತಿ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಆಪತ್ಕಾಲದಲ್ಲಿ ಅಂತಿಮ ಧಣಿಯಾಗಿ (Lender of last ಜಿಡಿಪಿ ಮತ್ತು ಹಣದುಬ್ಬರ: ಹಣದುಬ್ಬರ ನಿಯಂತ್ರಣ ಮತ್ತು ಅರ್ಥ Resort) ಕೊಡುವ ಸಾಲಗಳ ಮೇಲಿನ ಬಡ್ಡಿ ದರ ‘ಬ್ಯಾಂಕ್ ರೇಟ್’ ಈಗ ಶೇ.4.75 ಇರುತ್ತದೆ. ಈ ಮೂರು ದರಗಳು ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.
ಜಿಡಿಪಿ ಮತ್ತು ಹಣದುಬ್ಬರ: ಹಣದುಬ್ಬರ ನಿಯಂತ್ರಣ ಮತ್ತು ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳ ಸ್ಥಿರತೆ ಕಾಪಾಡುವುದು ಕೇಂದ್ರೀಯ ಬ್ಯಾಂಕಿನ (ನಮ್ಮಲ್ಲಿ ರಿಸರ್ವ್ ಬ್ಯಾಂಕಿನ) ಆದ್ಯ ಕರ್ತವ್ಯ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಬೇಕೆಂಬುದೂ ಅಷ್ಟೇ ಆವಶ್ಯಕ. ಆದ್ದರಿಂದ ಸರ್ಕಾರದ ಆರ್ಥಿಕ ನೀತಿ ಮತ್ತು ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಒಂದಕ್ಕೊಂದು ಪೂರಕವಾಗಿರಬೇಕು. ಸರ್ಕಾರವು ಸಾರ್ವಭೌಮವಾಗಿರುವುದರಿಂದ ಮತ್ತು ರಿಸರ್ವ್ ಬ್ಯಾಂಕ್ ಅದರ ಪರಧಿಯಲ್ಲಿ ಸ್ವತಂತ್ರ ಹಣಕಾಸು ವ್ಯವಸ್ಥೆಯ ನಿಯಂತ್ರಕನಾಗಿರುವುದರಿಂದ ಹಣಕಾಸು ನೀತಿ ಅದಕ್ಕೆ ಪೂರಕವಾಗಿರಬೇಕು ಎಂಬುದು ಕಡ್ಡಾಯ. ಆಗಾಗ ಸರ್ಕಾರದೊಡನೆ ಚರ್ಚೆಗಳು ನಡೆಯಬೇಕು.
ರಿಸರ್ವ್ ಬ್ಯಾಂಕ್ ಹಣದುಬ್ಬರ ದರ ಲೆಕ್ಕ ಹಾಕಲು ಗ್ರಾಹಕ ಬೆಲೆ ಸೂಚ್ಯಂಕವನ್ನು (Consumer Price Index) ಆಧಾರ ವಾಗಿಟ್ಟುಕೊಂಡಿದ್ದು ಇದುಶೇ.4.0 ಸಾಮಾನ್ಯ ಅಥವಾ ಆರ್ಥಿಕ ಬೆಳವಣಿಗೆಗೆ ಪೂರಕ ಎಂದು ಇಟ್ಟುಕೊಂಡಿದೆ. ಇದು ಶೇ.2.0 ಆಚೆಈಚೆ (ಶೇ.2.0 ಕನಿಷ್ಠ ಮತ್ತು ಶೇ.6.0 ಗರಿಷ್ಟ) ಚಲಿಸಬಹುದು ಎಂದಿಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ನೀತಿ ಬಡ್ಡಿ ದರಗಳನ್ನು ಬದಲಾಯಿಸುತ್ತಿರುತ್ತದೆ.
ಕೇಂದ್ರೀಯ ಬ್ಯಾಂಕಿನ ಅಂದಾಜಿನಂತೆ ಕೆಳಮಟ್ಟದಲ್ಲಿದ್ದ ಹಣದುಬ್ಬರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಶೇ.4.0ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಏರಿದ್ದರಿಂದ ಸ್ವಲ್ಪ ಮೇಲೆ ಹೋಗಿದೆ. ಆದ್ದರಿಂದ ಈ 2024-25ನೇ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸರಾಸರಿ ಶೇ.4.1 ಆದೀತೆಂದು ಅಂದಾಜಿಸಿದೆ. ಅದೇ ರೀತಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಅನುಕ್ರಮವಾಗಿ ಶೇ.4.8 ಮತ್ತು ಶೇ.4.2 ಎಂದು ಅಂದಾಜಿಸಿದ್ದು, ವಾರ್ಷಿಕ ಸರಾಸರಿ ಶೇ.4.5 ಆಗಬಹುದೆಂದು ಹೇಳಲಾಗಿದೆ. 2025-26ರ ಮೊದಲ ತ್ರೈಮಾಸಿಕದ ಅಂದಾಜು ಶೇ.4.3ಕ್ಕೆ ನಿಲ್ಲಬಹು ದೆಂದಿದ್ದು ಅಂತಾರಾಷ್ಟ್ರೀಯ ಅನಿಶ್ಚಿತತೆಗಳಿಂದ ಸ್ವಲ್ಪ ಏರುಪೇರಾಗ ಬಹುದೆಂದು ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ.
ಜಿಡಿಪಿ ಬೆಳವಣಿಗೆ ಈ ವರ್ಷ ಶೇ.7ರ ಮೇಲೆಯೇ ಇದ್ದ ವಾರ್ಷಿಕ ಸರಾಸರಿ ಶೇ.7.2 ಆಗಲಿದೆ ಎಂದು ಅಂದಾಜಿದೆ. ಬರುವ ಹಣಕಾಸು ವರ್ಷದ ಮೊದಲ ತೈಮಾಸಿಕದಲ್ಲಿ ಇದು ಸ್ವಲ್ಪ ಹೆಚ್ಚಾಗಿ ಶೇ.7.3ಕ್ಕೇರಬಹುದೆಂಬ ಆಶಾಭಾವನೆ ಇದೆ. ಆದರೆ ಅಂತಾರಾಷ್ಟ್ರೀಯ ಸ್ಥಿತಿ ಇಲ್ಲಿಯೂ ತೊಡಕಾಗುವ ಭಯವಿದೆ.
ನೀತಿ ದರಗಳ ಕಡಿತದ ನಿರೀಕ್ಷೆ: ಈ ವರ್ಷ ಮಾನ್ಸೂನ್ ಹಂಗಾಮಿನಲ್ಲಿ ಸಾಕಷ್ಟು ಮಳೆ ಬಿದ್ದಿರುವುದರಿಂದ ಕೃಷಿ ಉತ್ಪನ್ನ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೆ ಇತರ ವಲಯಗಳಲ್ಲೂ ಆಶಾದಾಯಕ ಸ್ಥಿತಿ ಇದೆ. ಹಣದುಬ್ಬರವೂ ಸದ್ಯ ನಿಯಂತ್ರಣದಲ್ಲಿದ್ದು, ಬೆಳವಣಿಗೆಗೆ ಪೂರಕ ವಾತಾವರಣವಿದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ಎಂಪಿಸಿ ಸುಳಿವು ನೀಡಿರುವಂತೆ ಬೆಳವಣಿಗೆಗೆ ಪೂರಕವಾಗುವಂತೆ ಮುಂದಿನ ಸಭೆಯಲ್ಲಿ (ಡಿಸೆಂಬರ್) ರೆಪೊ ದರವನ್ನು ಕನಿಷ್ಠ ಶೇ.0.25 (25 ಪೈಸೆ Basis Points) ಕಡಿಮೆ ಮಾಡಿ ಶೇ.6.25ಕ್ಕೆ ನಿಲ್ಲಿಸಬಹುದೆಂದು ಚರ್ಚೆಗಳು ನಡೆಯುತ್ತಿವೆ. ಪರಿಣಾಮವಾಗಿ ತ.ರೇ. ಸೌ, ಬಡ್ಡಿ ದರ ಶೇ.6.00ಗೆ ಮತ್ತು ಬ್ಯಾಂಕ್ ರೇಟ್ ಶೇ.6.50ಕ್ಕೆ ಇಳಿಯಬೇಕಾಗುತ್ತದೆ.
ಆದರೆ ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಆತಂಕಗಳಾದ ಕೆಂಪು ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ. ಸಮುದ್ರದಲ್ಲಿನ ಗೊಂದಲ, ಮುಂದುವರಿಯುತ್ತಿರುವ ಇಸ್ರೇಲ್ – ಲೆಬನಾನ್ ಮತ್ತು ಉಕ್ರೇನ್-ರಷ್ಯಾ ಘರ್ಷಣೆಗಳು ಹಾಗೂ ಕಚ್ಚಾತೈಲ ಶೇ.4.75 ಇರುತ್ತದೆ. ಈ ಮೂರೂ ದರಗಳು ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪೂರೈಕೆ ಮತ್ತು ಬೆಲೆ ಅನಿಶ್ಚಿತತೆಗಳು ಈ ನಮ್ಮ ಜಿಡಿಪಿ ಮತ್ತು ಹಣದುಬ್ಬರದ ಪಾತ್ರವಹಿಸುತ್ತವೆ. ಮೇಲೆ ಪರಿಣಾಮ ಬೀರಿ ರಿಸರ್ವ್ ಬ್ಯಾಂಕ್ ನಿರ್ಧಾರ ಮುಂದೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೂ ಇಂದಿಲ್ಲ ನಾಳೆ ಬಡ್ಡಿ ದರಗಳು ಇಳಿಯುತ್ತವೆ.
ಕೇಂದ್ರೀಯ ಬ್ಯಾಂಕಿನ ಅಂದಾಜಿನಂತೆ ಕೆಳಮಟ್ಟದಲ್ಲಿದ್ದ ಹಣದುಬ್ಬರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಶೇ.4.0ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಏರಿದ್ದರಿಂದ ಸ್ವಲ್ಪ ಮೇಲೆ ಹೋಗಿದೆ. ಆದ್ದರಿಂದ ಈ 2024-25ನೇ ವರ್ಷದ ಎರಡನೇ ತೈಮಾಸಿಕದಲ್ಲಿ ಸರಾಸರಿ ಶೇ.4.1 ಆದೀತೆಂದು ಅಂದಾಜಿಸಿದೆ. ಅದೇ ರೀತಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಅನುಕ್ರಮವಾಗಿ ಶೇ.4.8 ಮತ್ತು ಶೇ.4.2 ಎಂದು ಅಂದಾಜಿಸಿದ್ದು, ವಾರ್ಷಿಕ ಸರಾಸರಿ ಶೇ.4.5 ಆಗಬಹುದೆಂದು ಹೇಳಲಾಗಿದೆ. 2025-26ರ ಮೊದಲ ತೈಮಾಸಿಕದ ಅಂದಾಜು ಶೇ.4.3ಕ್ಕೆ ನಿಲ್ಲಬಹುದೆಂದಿದ್ದು ಅಂತಾರಾಷ್ಟ್ರೀಯ ಅನಿಶ್ಚಿತತೆಗಳಿಂದ ಸ್ವಲ್ಪ ಏರುಪೇರಾಗಬಹುದೆಂದು ಶಂಕೆಯನ್ನು ವ್ಯಕ್ತಪಡಿಸಲಾಗಿದೆ.