Mysore
17
few clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ರಿಲ್ಯಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ: ಅರಮನೆ ಆವರಣದಲ್ಲಿ ವಿಶ್ರಾಂತಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಈಗ ರಿಲ್ಯಾಕ್ಸ್‌ ಮೂಡ್‌ನಲ್ಲಿವೆ.

ಅರಮನೆ ಆವರಣದಲ್ಲಿ ದಸರಾ ಗಜಪಡೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಮಾವುತರು ಹಾಗೂ ಕಾವಾಡಿಗರು ಆನೆಗಳಿಗೆ ಸ್ನಾನ ಮಾಡಿಸಿದ್ದಾರೆ.

ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭೀರ್ಯದ ಹೆಜ್ಜೆ ಹಾಕಿದ ಅಭಿಮನ್ಯು ಅಂಡ್‌ ಟೀಂ ರೆಸ್ಟ್‌ ಮೂಡ್‌ನಲ್ಲಿವೆ.

ಇನ್ನು ಮಾವುತರು ಹಾಗೂ ಕಾವಾಡಿಗರು ಕೂಡ ಜಂಬೂಸವಾರಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತೀವ್ರ ಸಂತೋಷದಲ್ಲಿದ್ದು, ನಾಳೆ ಆನೆಗಳೊಂದಿಗೆ ಕಾಡಿಗೆ ಮರಳುವ ಸಾಧ್ಯತೆಯಿದೆ.

ಇನ್ನು ಇಂದು ಭಾನುವಾರವಾದ ಹಿನ್ನೆಲೆಯಲ್ಲಿ ಆನೆಗಳನ್ನು ನೋಡಲು ಹಾಗೂ ಅರಮನೆಯನ್ನು ವೀಕ್ಷಣೆ ಮಾಡಲು ನೂರಾರು ಪ್ರವಾಸಿಗರು ಭೇಟಿ ನೀಡಿದ್ದಾರೆ.

 

Tags:
error: Content is protected !!