ಮೈಸೂರಿನ ರೈಲು ನಿಲ್ದಾಣದ ಬಳಿ ಇರುವ ಪ್ರೀ-ಪೇಯ್ಡ್ ಆಟೋ ಬುಕಿಂಗ್ ಕೇಂದ್ರವು ಸ್ಥಗಿತಗೊಂಡು ಸಾಕಷ್ಟು ತಿಂಗಳುಗಳೇ ಕಳೆದಿದ್ದು, ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ತೆರಳುವವರು ಅಧಿಕ ಹಣ ನೀಡಿ ಆಟೋ ಸೌಲಭ್ಯ ಪಡೆದುಕೊಳ್ಳಬೇಕಿದೆ.
ಕಳೆದ ಬಾರಿ ನಾನು ಪ್ರೀಪೇಯ್ಡ್ ಆಟೋ ಬುಕ್ ಮಾಡಿಕೊಂಡು ರೈಲು ನಿಲ್ದಾಣದಿಂದ ಶ್ರೀರಾಂಪುರಕ್ಕೆ ಕೇವಲ 110 ರೂ ಪಾವತಿಸಿ ಹೋಗಿದ್ದೆ. ಆದರೆ ಈಗ ಇಲ್ಲಿ ಪ್ರೀಪೇಯ್ಡ್ ಸೇವೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಆಟೋಗಳಿಗೆ 250-300 ರೂ. ಪಾವತಿಸುವಂತಾಗಿದೆ.
ದಸರಾ ಪ್ರಯುಕ್ತ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಮೈಸೂರಿನ ವಿವಿಧ ಭಾಗಗಳಿಗೆ ತೆರಳಲು ಆಟೋ ಸೌಲಭ್ಯ ಪಡೆದುಕೊಳ್ಳುತ್ತಾರೆ. ಆದರೆ ರೈಲು ನಿಲ್ದಾಣದ ಬಳಿ ಇರುವ -ಪ್ರೀಪೇಯ್ಡ್ ಆಟೋ ಬುಕಿಂಗ್ ಸೆಂಟರ್ ಸ್ಥಗಿತಗೊಂಡಿರುವ ಪರಿಣಾಮ ಪ್ರವಾಸಿಗರು ಆಟೋಗಳಿಗೆ ದುಪ್ಪಟ್ಟು ಹಣ ನೀಡಬೇಕಾಗಿದೆ. ಅದ್ದರಿಂದ ಸಂಬಂಧಪಟ್ಟವರು ಕೂಡಲೇ ಇಲ್ಲಿನ ಪ್ರೀ-ಪೇಯ್ಡ್ ಆಟೋ ಬುಕಿಂಗ್ ಕೇಂದ್ರವನ್ನು ಪುನರಾಂಭಿಸಲು ಕ್ರಮ ಕೈಗೊಳ್ಳಬೇಕು.
-ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು