Mysore
16
broken clouds

Social Media

ಶನಿವಾರ, 10 ಜನವರಿ 2026
Light
Dark

ಕಬ್ಬು ತುಂಬಿದ ಟ್ರ‍್ಯಾಕ್ಟರ್ ಪಲ್ಟಿ: 6 ವರ್ಷದ ಬಾಲಕಿ ಸಾವು

ಕಿಕ್ಕೇರಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ  6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಕೋಡಿಮರನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮಹಾರಾಷ್ಟ ಮೂಲದ ಕವಿತಾ ರಾಥೋಡ್ ಅವರ ಪುತ್ರಿ ರೋಶಿಣಿ ಮೃತ ಬಾಲಕಿ. ಕವಿತಾ ರಾಥೋಡ್ ಕುಟುಂಬವು ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಕಾರ್ಮಿಕರಾಗಿ ಬಂದಿದ್ದು, ಕೋಡಿಮರನಹಳ್ಳಿ ಗ್ರಾಮದಲ್ಲಿ ರವಿ ಎಂಬುವವರಿಗೆ ಸೇರಿದ ಕಬ್ಬನ್ಬು ಕಟಾವು ಮಾಡಿ ಕಬ್ಬನ್ನು ಟ್ರ್ಯಾಕ್ಟರ್ ಗೆ ತುಂಬಿ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.

ಟ್ರ್ಯಾಕ್ಟರ್‌ನಲ್ಲಿದ್ದ ಕಬ್ಬು ಜಾರಿದಾಗ ಟ್ರ್ಯಾಕ್ಟರ್ ರಸ್ತೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ರವಿ ಎಂಬುವವರ ಮನೆ ಪಕ್ಕದಲ್ಲಿ ಹಾಕಲಾಗಿದ್ದ ನಲ್ಲಿಯಲ್ಲಿ ಬಾಲಕಿ ರೋಶಿಣಿ ನೀರು ಕುಡಿಯುತ್ತಿದ್ದು, ಕಬ್ಬು ಸಂಪೂರ್ಣವಾಗಿ ಈಕೆಯ ಮೇಲೆ ಬಿದ್ದಿದೆ.

ಇದನ್ನು ನೋಡಿದ ಸಾರ್ವಜನಿಕರು ಕೂಡಲೇ ಜೆಸಿಬಿ ಮೂಲಕ ಕಬ್ಬನ್ನು ತೆರವುಗೊಳಿಸಿ ಅಸ್ವಸ್ಥಳಾಗಿದ್ದ ಬಾಲಕಿ ರೋಶಿಣಿಯನ್ನು ಕೆ.ಆರ್.ಪೇಟೆ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಳು.
ಈ ಸಂಬಂಧ ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:
error: Content is protected !!