Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಭಿಮನ್ಯು-ಸಾರಥಿ ಬಾಂಧವ್ಯಕ್ಕೆ 25 ವಸಂತ!

ಕಾಯಕದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ದಸರಾ ಗಜಪಡೆಯ ನಾಯಕ ಅಭಿಮನ್ಯುವಿನ ಪರಮಾಪ್ತ ಮಾವುತ

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ಈತ ದಸರಾ ಗಜಪಡೆಯ ನಾಯಕ ಅಭಿಮನ್ನು ಏನ ಸಾರಥಿ ಕಾಯಕವನ್ನು ಉತ್ಸಾಹದಿಂದ ಅಪ್ಪಿಕೊಂಡ ಮಾವುತ… ಬರೋಬ್ಬರಿ 25 ವರ್ಷಗಳಿಂದ ಅಭಿಮನ್ಯುವಿನ ಪರಮಾಪ್ತನಾಗಿ ಬೆಳೆದ ಮಾವುತ ವಸಂತ ತಮ್ಮ ಕಾಯಕದ ರಜತ ಸಂಭ್ರಮದಲ್ಲಿದ್ದಾರೆ.

ದಸರಾ ಗಜಪಡೆಯನ್ನು ಮುನ್ನಡೆಸುವ ಮಾವು ತರು ಮತ್ತು ಕಾದಾರಿಗಳ ಕೆಲಸ ಮಹತ್ವಪೂರ್ಣವಾದುದು. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಆನೆಯನ್ನು ಮುನ್ನಡೆಸುವುದು ಪ್ರತಿಯೊಬ್ಬ ಮಾವುತರ ಜೀವನದ ಮಹೋನ್ನತ ಸಾಧನೆ.

ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಗಜಪಡೆಯ ನಾಯಕ ಅಭಿಮನ್ಯುವಿನೊಂದಿಗೆ 25 ವರ್ಷಗಳಿಂದ ಭಾಗವಹಿಸುತ್ತಿರುವ ಮಾವುತ ವಸಂತ ವಿಶಿಷ್ಟ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಅಭಿಮನ್ಯು ಆನೆ ಕೂಬಿಂಗ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವುದು ಜಾಗಜ್ಜಾಹೀರು. ವಸಂತ ಇದ್ದರೆ ಎಂತಹ ಕಾರ್ಯಾಚರಣೆಯಾದರೂ ಅಭಿಮನ್ಯು ಯಶಸ್ವಿಯಾಗಿ ನಿಭಾಯಿಸುವುದು ನಿಶ್ಚಿತ. ಅಭಿಮನ್ಯುವಿನ ಪ್ರತಿ ಹೆಜ್ಜೆಯನ್ನೂ ನಿರ್ದೇಶಿಸುವ ವಿಶೇಷ ಕೌಶಲ್ಯ ವಸಂತ ಅವರಿಗೆ ಕರಗತವಾಗಿದೆ.

ಒಂದು ಕಾಲದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಅಭಿಮನ್ಯು ಆನೆಯನ್ನು 1977ರಲ್ಲಿ ಕೊಡಗಿನ ಆನೆಚೌಕೂರು ಬಳಿ ಖೆಡ್ಡಾಕ್ಕೆ ಬೀಳಿಸಿ ಸೆರೆ ಹಿಡಿಯಲಾಯಿತು. ನಂತರ ಅಭಿಮನ್ಯುವಿಗೆ ವಸಂತ ಅವರ ತಂದೆ ಸಣ್ಣಪ್ಪ ಮಾವುತರಾಗಿದ್ದರು. ಇದರಿಂದ ವಸಂತ ಅವರಿಗೆ ಚಿಕ್ಕ೦ದಿನಿ೦ದಲೂ ಅಭಿಮನ್ಯುವಿನ ಜೊತೆಯಲ್ಲೇ ಬೆಳೆಯುವ ಅವಕಾಶ ಸಿಕ್ಕಿತ್ತು. ಸಣ್ಣಪ್ಪ ನಿವೃತ್ತರಾದ ನಂತರ ಅಭಿಮನ್ಯುವಿನ ಹೊಣೆ ವಸಂತ ಅವರ ಪಾಲಿಗೆ ಬಂತು. ಅಂದಿನಿಂದ ಎರಡೂ ಜೀವಗಳ ನಡುವೆ ಪರಸ್ಪರ ಆತ್ಮೀಯತೆ, ವಿಶ್ವಾಸ ಬೆಳೆಯಿತು. ಬಾಲ್ಯದಿಂದಲೂ ಆಭಿಮನ್ಯುವಿನೊಂದಿಗೆ ಆಡಿ ಬೆಳೆದ ವಸಂತ ಮಾವುತ ಎನ್ನುವುದಕ್ಕಿಂತ ಒಳ್ಳೆಯ ಗೆಳೆಯನಾಗಿದ್ದಾನೆ. 58ರ ಹರಯದ ಅಭಿಮನ್ಯು 2.68 ಮೀ. ಎತ್ತರ, 3.51 ಮೀ. ಉದ್ದ, 5,560 ಕೆ.ಜಿ. ತೂಕ ಹೊಂದಿದೆ. ಅರಣ್ಯ ಇಲಾಖೆ ನಿಯಮದ ಪ್ರಕಾರ 60 ವರ್ಷ ತುಂಬಿದ ಆನೆಗೆ ಭಾರ ಹೊರಿಸುವಂತಿಲ್ಲ. ಹಾಗಾಗಿ ಈ ಬಾರಿ ಅಲ್ಲದೇ, 2025ರ ದಸರಾದಲ್ಲೂ ಅಭಿಮನ್ಯು ಆನೆಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಸಿಗಬಹುದು. ನಂತರ ಭಾರ ಹೊರುವಿಕೆಯಿಂದ ಅಂದರೆ ಅಂಬಾರಿ ಹೊರುವ ಜಬಾಬ್ದಾರಿಯಿಂದ ಮುಕ್ತಿ ಸಿಗಬಹುದು.

25 ವರ್ಷಗಳ ಹಿಂದೆ ದಸರೆಗೆ ಬಂದ ಅಭಿಮನ್ಯು ಜ೦ಬೂ ಸವಾರಿಯಲ್ಲಿ ಐದಾರು ವರ್ಷಗಳ ಕಾಲ ಕರ್ನಾಟಕ ವಾದ್ಯಗೋಷ್ಠಿಯ ಗಾಡಿಯನ್ನು ಎಳೆಯುತ್ತಿದ್ದ ಬಳಿಕ ಛತ್ರಿ ಹಿಡಿದ ಬಾವುಟದ ಆನೆಯಾಗಿ ಸಾಗಿದೆ. ಅಷ್ಟೊತ್ತಿಗಾಗಲೇ ಅಭಿಮನ್ಯುವಿನ ದೇಹ ಬೆಳೆದು ಆನೆಗಾಡಿಯ ನೊಗಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಹಾಗಾಗಿ 2015ರಲ್ಲಿ ಅಭಿಮನ್ಯುಗೆ ಆನೆ ಗಾಡಿ ಎಳೆಯುವುದರಿಂದ ವಿನಾಯಿತಿ ನೀಡಿ, ಜಂಬೂಸವಾರಿಯ ನೌಫತ್‌ ಆನೆಯಾಗಿ ಭಾಗವಹಿಸಲು ಅವಕಾಶ ನೀಡಲಾಯಿತು. ನಂತರ ಗಜಪಡೆಯ ನಾಯಕನಾಗಿ ಬಡ್ತಿ ದೊರೆತದ್ದು ಇತಿಹಾಸ.

ವಸಂತನಿದ್ದರೆ ಅಭಿಮನ್ಯುಗೆ ಡಬಲ್ ಮೀಟ‌ರ್:
ಮೈಸೂರು: ವಸಂತ ಬೆನ್ನ ಮೇಲೆ ಇದ್ದರೆ ಅಭಿಮನ್ಯುಗೆ ಡಬಲ್ ಮೀಟರ್ ಬಂದಂತೆ. ಮಹಾರಾಷ್ಟ್ರದ ಸಿಂಧೂ ದರ್ಗಾದಲ್ಲಿ ಸಲಗ ಸೆರೆ, ವೀರನಹೊಸಹಳ್ಳಿ ಬಳಿ ಕೆರೆಯಲ್ಲಿ ಸಿಲುಕಿದ ಗಂಡಾನೆ ರಕ್ಷಣೆ ಹಾಸನ ಜಿಲ್ಲೆಯ ಯಸಳೂರು, ಕೆ. ಆರ್.ನಗರ, ಕೊಳ್ಳೇಗಾಲ, ಮದ್ದೂರು, ಪಿರಿಯಾಪಟ್ಟಣ, ಹಾಗೆಯೇ ಕೇರಳ, ಮಹಾರಾಷ್ಟ್ರ, ಗೋವಾ ಮುಂತಾದೆಡೆ ಕಾಡಾನೆ ನೆರೆ, ಕೇರಳದ ಬತ್ತೇರಿ ಮುತ್ತುಂಗ, ರಾಮನಗರದ ಮೇಟುಗುಪ್ಪೆ, ಯಳಂದೂರು, ಮದ್ದೂರು ವಲಯದಲ್ಲಿ ಖಾಲಿ ಕಾರ್ಯಾಚರಣೆ ಹೀಗೆ 100ಕ್ಕೂ ಹೆಚ್ಚು ಆನೆ, 20ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾನೆ. ಇದರಲ್ಲಿ ವಸಂತ ಅವರ ಧೈರ್ಯ ಮತ್ತು ಪಾತ್ರವೂ ಬಹಳಷ್ಟಿದೆ. ಯಾವುದೇ ಅಂಜಿಕೆ ಇಲ್ಲದೆ ಹುಲಿ, ಚಿರತೆ, ಪುಂಡಾನೆಗಳ ತೆರೆಗೆ ಮುನ್ನುಗ್ಗುತ್ತಾನೆ ಅಭಿಮನ್ಯು.

Tags: