ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಗ್ರಾಮದಲ್ಲಿರುವ ಗೋಲ್ಡನ್ ಟೆಂಪಲ್ ಒಂದು ಬೌದ್ಧ ಮಂದಿರವಾಗಿರುವ ಜತೆಗೆ ಸುಂದರ ಪ್ರವಾಸಿತಾಣವೂ ಆಗಿದೆ. ಈ ಗೋಲ್ಡನ್ ಟೆಂಪಲ್‌ಗೆ ದೇಶ ವಿದೇಶ ಗಳಿಂದ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದ ಸಾಕಷ್ಟು ಶಾಲಾ ವಿದ್ಯಾರ್ಥಿಗಳೂ ಪ್ರವಾಸಕ್ಕೆಂದು ಇಲ್ಲಿಗೆ ಬಂದು ಹೋಗುವುದು ಸಾಮಾನ್ಯ. ಇಂತಹ ಪ್ರವಾಸಿ ತಾಣಕ್ಕೆ ಕೊಪ್ಪದಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಕೆಲ ಭಾಗಗಳಲ್ಲಿ ಗುಂಡಿ ಬಿದ್ದಿದ್ದು, ಸವಾರರು ಪರದಾಡುವಂತಾ ಗಿದೆ. ನಿತ್ಯ ಇಲ್ಲಿಗೆ ಹೊರ ಊರುಗಳಿಂದ ಪ್ರವಾಸಿಗರು ಬಂದು ಹೋಗುವುದರಿಂದ ಇಂತಹ ಪ್ರವಾಸಿ ತಾಣಗಳಿಗೆ ಗುಣಮಟ್ಟದ ರಸ್ತೆ ನಿರ್ಮಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ಸಂಬಂಧಪಟ್ಟ
ಅಧಿಕಾರಿಗಳು ಗಮನಹರಿಸಿ ಈ ರಸ್ತೆಯನ್ನು ದುರಸ್ತಿಗೊಳಿಸಬೇಕಿದೆ.
ನಾಗೇಶ್, ಮಾನಸಗಂಗೋತ್ರಿ, ಮೈಸೂರು,