Mysore
22
mist

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ: ಪೈಶಾಚಿಕ ಕೃತ್ಯಗಳಿಗೆ ಕೊನೆ ಎಂದು?

ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಶಾಲೆಯ ಮುಖ್ಯಸ್ಥ ಹಾಗೂ ಶಿಕ್ಷಕರು ಸೇರಿ ನರಬಲಿ ನೀಡಿರುವ ಪೈಶಾಚಿಕ ಕೃತ್ಯವೊಂದು ಉತ್ತರ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕರೇ ವಾಮಾಚಾರದಂತಹ ಪೈಕಾಚಿಕ ಕೃತ್ಯವನ್ನು ನಂಬಿ ಮಗುವನ್ನು ನರಬಲಿ ನೀಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ.

ಇಲ್ಲಿಯವರೆಗೂ ಮಕ್ಕಳ ಮೇಲೆ ಶಿಕ್ಷಕರು ದೌರ್ಜನ್ಯವೆಸಗಿರುವ ಸುದ್ದಿಗಳನ್ನು ಕೇಳಿ ಆತಂಕವಾಗುತ್ತಿತ್ತು. ಆದರೆ ಈಗ ಮಕ್ಕಳನ್ನು ನರಬಲಿ ಕೊಡುವ ಮಟ್ಟಿಗೆ ಸಮಾಜದಲ್ಲಿ ಕ್ರೂರ ಮನಸ್ಥಿತಿ ನೆಲೆಯೂರಿದೆ ಎಂದರೆ ಗಂಭೀರವಾಗಿ ಆಲೋಚಿಸಬೇಕಿದೆ. ಹಾಗೆಯೇ ಮತ್ತೊಂದೆಡೆ ಶಾಲೆಗೆ ಬ್ಯಾಗ್ ತಂದಿಲ್ಲವೆಂದು ವಿದ್ಯಾರ್ಥಿಯೊಬ್ಬನ ಬಟ್ಟೆ ಕಳಚಿ ವಿದ್ಯುತ್ ಶಾಕ್ ನೀಡಿದ ಘಟನೆಯೂ ವರದಿಯಾಗಿದೆ. ಇಂತಹ ಘಟನೆಗಳನ್ನು ನೋಡುತ್ತಿದ್ದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ಪಡುವಂತಾಗಿದೆ. ಆದ್ದರಿಂದ ಅಲ್ಲಿನ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.

 

Tags:
error: Content is protected !!