Mysore
25
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಸಿಎಂ ವಿರುದ್ಧದ ಎಫ್‌ಐಆರ್ ನಲ್ಲಿ ಯಾವೆಲ್ಲಾ ಸೆಕ್ಷನ್‌ ದಾಖಲು? ಇಲ್ಲಿದೆFIR ಪ್ರತಿ

ಮೈಸೂರು: ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 4ಮಂದಿ ವಿರುದ್ಧ ಇಲ್ಲಿನ ಲೋಕಾಯುಕ್ತ ಠಾಣೆಯಲ್ಲಿ ಸಿಆರ್‌ಪಿಸಿ ಸೆಕ್ಷನ್‌ 154 ಅಟಿ ಎಫ್‌ಐಆರ್‌ ದಾಖಲಾಗಿದೆ.

ಇದರಲ್ಲಿ A1 ಆರೋಪಿ ಸಿಎಂ ಸಿದ್ದರಾಮಯ್ಯ, A2 ಆರೋಪಿ ಪತ್ನಿ ಪಾರ್ವತಿ ಸಿದ್ದರಾಮಯ್ಯ, A3 ಆರೋಪಿ ಭಾಮೈದಾ ಮಲ್ಲಿಕಾರ್ಜುನಸ್ವಾಮಿ ಮತ್ತು A4 ಆರೋಪಿ ಭೂ ಮಾಲೀಕ ಎನ್ನಲಾದ ಜೆ.ದೇವರಾಜು ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಯಾವ-ಯಾವ ಸೆಕ್ಷನ್‌ ದಾಖಲು?
ಭಾರತೀಯ ದಂಡಸಂಹಿತೆ ಕಾಯ್ದೆ ಸೆಕ್ಷನ್‌ 120ಬಿ, 166,403,406,420,426,465,486,340,351 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1998ರ ಸೆಕ್ಷನ್‌ 9,13 ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ 1988ರ ಸೆಕ್ಷನ್‌ 3, 53,54 ಹಾಗೂ ಕರ್ನಾಟಕ ಭೂ ಕಬಳಿಕೆ ಕಾಯ್ದೆ 2011ರ ಸೆಕ್ಷನ್‌ 3,4ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂಬರ್‌ 462, 464ಕ್ಕೆ ಸಂಬಂಧಿಸಿದಂತೆ 1986ರಿಂದ 2023ರ ನವೆಂಬರ್‌ 9ರವರೆಗೆ ನಡೆದಿರುವ ಎಲ್ಲ ವಹಿವಾಟಿನ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಿದ್ದಾರೆ.

FIRಪ್ರತಿ

 

 

Tags:
error: Content is protected !!